December 27, 2024

Newsnap Kannada

The World at your finger tips!

WhatsApp Image 2023 05 27 at 7.40.07 PM

ನೂತನ ಸಂಸತ್ ಭವನ ಉದ್ಘಾಟನೆ : ಶೃಂಗೇರಿಯ ಪುರೋಹಿತರಿಂದ ಧಾರ್ಮಿಕ ವಿಧಿವಿಧಾನ

Spread the love

ನಾಳೆ ನೂತನ ಸಂಸತ್ ಭವನದ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೂ ಮುನ್ನ ಇಂದು ಸಂಜೆಯಿಂದ ಸಂಸತ್ ಭವನದಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ.

ಶೃಂಗೇರಿಯ ಶಾರದಾ ಪೀಠದಿಂದ ಪುರೋಹಿತರು, ವಿದ್ವಾಂಸರ ನೇತೃತ್ವದಲ್ಲಿ ಸಂಸತ್ ಭವನ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೆಮ್ಮೆಯ ಪ್ರತೀಕ ಎಂದೇ ಕರೆಯುವ ನೂತನ ಸಂಸತ್ ಭವನ ನಾಳೆ ಲೋಕಾರ್ಪಣೆ ಮಾಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜಕೀಯದ ಒಟ್ಟು 19 ಪ್ರತಿಪಕ್ಷಗಳು ಬಿಹಿಷ್ಕರಿಸಿದ್ದರೆ, ಬಿಜೆಪಿ ಜೊತೆಗಿನ ಭಿನ್ನಾಭಿಪ್ರಾಯನ್ನು ಬದಿಗೊತ್ತಿ ಕೆಲವು ರಾಜಕೀಯ ಪಕ್ಷಗಳು ಪಾಲ್ಗೊಳ್ಳಲಿವೆ.

ಕರ್ನಾಟಕದಿಂದ ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. ಇದು ಬಿಜೆಪಿ, ಆರೆಸ್ಸೆಸ್ ಕಾರ್ಯಕ್ರಮವಲ್ಲ. ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿರುವ ಸಂಸತ್ ಭವನ ನಿರ್ಮಾಣವಾಗಿದೆ ಎಂದು ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.

ಹೊಸ ನಾಣ್ಯ ಬಿಡುಗಡೆ:
75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವಾರ್ಥವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ನಾಣ್ಯವನ್ನು ಭಾನುವಾರ ಅನಾವರಣಗೊಳಿಸಲಿದ್ದಾರೆ.75 ರೂಪಾಯಿಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ಭಾರತ್ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ಇಂಡಿಯಾ ಎಂದು ಇಂಗ್ಲಿಷ್‍ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂಪಾಯಿ ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ.

ವಿಶೇಷತೆಗಳು:
ನೂತನ ಸಂಸತ್ ಭವನದ ಎತ್ತರ – 50 ಮೀಟರ್
ಸಂಸತ್ ಭವನದ ಒಟ್ಟು ನಿರ್ಮಾಣ ವೆಚ್ಚ- 971 ಕೋಟಿ ರೂ.
ಸಂಸತ್ ಭವನದ ವಿಸ್ತೀರ್ಣ- 64,500 ಚದರ್ ಮೀಟರ್
ಲೋಕಸಭಾ ಸದಸ್ಯರಿಗೆ ಆಸನ ವ್ಯವಸ್ಥೆ – 888
ರಾಜ್ಯಸಭೆ ಸದಸ್ಯರಿಗೆ ಆಸನ ವ್ಯವಸ್ಥೆ – 384
ಹೊಸ ಕಟ್ಟಡದಲ್ಲಿ ಸಂಸದರ ಆಸನ ಸಾಮಥ್ರ್ಯ- 1,224:
ಹಾಲಿ ಸಂಸತ್ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ – 5000

ಇತಿಹಾಸವಾಗಲಿದೆ ಸಂಸತ್‌ ಭವನ

96 ವರ್ಷಗಳ ಇತಿಹಾಸವಿರುವ ಹಾಲಿ ಸಂಸತ್‌ ಭವನ ಇನ್ನೇನು ಚರಿತ್ರೆಯ ಪುಟ ಸೇರಲಿದೆ. ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ಗಳಿಗೆಯಿಂದ ಹಿಡಿದು, ದೇಶವನ್ನು ಕಟ್ಟುವ ಎಲ್ಲ ಕಾಯ್ದೆಗಳು, ಕಾನೂನುಗಳನ್ನು ರೂಪಿಸುವಲ್ಲಿ ಸಾಕ್ಷಿಯಾಗಿರುವ ಈ ಸಂಸತ್‌ ಭವನ ಮ್ಯೂಸಿಯಂ ಆಗಿ ಮಾರ್ಪಾಡಾಗಲಿದೆ. ಈ ಭವನದ ಐತಿಹ್ಯವನ್ನು ಒಮ್ಮೆ ನೋಡಿದರೆ ದೇಶದ ಎಲ್ಲ ಸ್ಮರಣೀಯ ಸಂಗತಿಗಳೂ ಇದರ ಜತೆಗೆ ಮೇಳೈಸಿಕೊಂಡಿರುವುದು ಕಾಣಿಸುತ್ತದೆ. ಸ್ವಾತಂತ್ರ್ಯ ಸಿಕ್ಕಾಗ ಅಂದಿನ ಪ್ರಧಾನಿ ಪಂಡಿತ್‌ ನೆಹರೂ, ಶಾಸ್ತ್ರೀಜಿ, ಇಂದಿರಾ, ರಾಜೀವ್‌, ಅಟಲ್‌, ಪಿ.ವಿ.ನರಸಿಂಹರಾವ್‌, ದೇವೇಗೌಡ,  ಮನಮೋಹನ್‌ ಸಿಂಗ್‌, ನರೇಂದ್ರ ಮೋದಿ ವರೆಗೆ ಹಲವಾರು ಪ್ರಧಾನಿಗಳ ಆಡಳಿತಕ್ಕೂ ಸಾಕ್ಷಿಯಾಗಿದೆ.

ಹಾಲಿ ಸಂಸತ್‌ ಭವನ ಮ್ಯೂಸಿಯಂ ಆಗಲಿದೆ

ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ಕಾಯ್ದೆ, ಕಾನೂನು ರಚಿಸುವಲ್ಲಿ ಸಾಕ್ಷಿಯಾಗಿರುವ ಪ್ರಸಕ್ತ ಸಂಸತ್‌ ಭವನವನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. ಹೊಸ ಸಂಸತ್‌ ಭವನ ಆರಂಭವಾದ ಮೇಲೆ, ಹಳೆ ಸಂಸತ್‌ ಕಟ್ಟಡವನ್ನು ದುರಸ್ತಿಗೊಳಿಸಲಾಗುತ್ತದೆ ಎಂದು ಕೇಂದ್ರ ಸಚಿವ ಹರದೀಪ್‌ ಸಿಂಗ್‌ ಪುರಿ 2021ರ ಮಾರ್ಚ್‌ನಲ್ಲಿ ಹೇಳಿದ್ದರು.ಅದಕ್ಕೆ ಐತಿಹಾಸಿಕ ಮಹತ್ವವೂ ಇರುವುದರಿಂದ ಅದನ್ನು ರಕ್ಷಿಸಲಾಗುತ್ತದೆ.ನೂತನ ಸಂಸತ್ ಭವನ ಉದ್ಘಾಟನೆ : ಶೃಂಗೇರಿಯ ಪುರೋಹಿತರಿಂದ ಧಾರ್ಮಿಕ ವಿಧಿವಿಧಾನ

ಸಂಸತ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅಲ್ಲಿ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಇದಲ್ಲದೆ ಒಂದು ಭಾಗವನ್ನು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲೂ ಉದ್ದೇಶ ಹೊಂದಲಾಗಿದೆ. ಪ್ರವಾಸಿಗರಿಗೆ ಈಗ ಇರುವ ಲೋಕಸಭೆಗೆ ಭೇಟಿ ನೀಡಿ ಅಲ್ಲಿನ ವಿಚಾರಗಳ ಬಗ್ಗೆ ತಿಳಿದು ಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

Copyright © All rights reserved Newsnap | Newsever by AF themes.
error: Content is protected !!