ರಾಜ್ಯದಲ್ಲಿ ಜ. 1 ರಿಂದ ಶಾಲೆಗಳು ಆರಂಭಕ್ಕೆ ಸಿಎಂ ಹಸಿರು ನಿಶಾನೆ

Team Newsnap
1 Min Read

ಜನವರಿ 1ರಿಂದ 10ನೇ ತರಗತಿ ಹಾಗೂ 12ನೇ ತರಗತಿ ಆರಂಭಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.

6, 7, 8, 9 ನೇ ತರಗತಿಗಳಿಗೆ ವಿದ್ಯಾಗಮ ತರಗತಿಗಳು ಆರಂಭವಾಗುತ್ತವೆ.

ಕೊನೆಗೂ ರಾಜ್ಯದಲ್ಲಿ ಶಾಲಾ -ಕಾಲೇಜುಗಳ ಪುನರಾರಂಭದ ಬಗ್ಗೆ ಮುಹೂರ್ತ ಜನವರಿ 1ಕ್ಕೆ ಫಿಕ್ಸ್ ಮಾಡಲಾಗಿದೆ.

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜನವರಿ 1ರಿಂದ 10 ಮತ್ತು 12ನೇ ತರಗತಿ ಆರಂಭಿಸ ಲಾಗುತ್ತಿದೆ. ಜನವರಿ 1ರಿಂದ 6 ರಿಂದ 9ನೇ ತರಗತಿ ವಿದ್ಯಾರ್ಥಿಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಚಟುವಟಿಕೆ ಮುಂದುವರೆಸಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

ಸಿಎಂ ಸಭೆಯ ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಮಾತನಾಡಿ, 2021 ಜನವರಿ 1ರಿಂದ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. ಆರಂಭದಲ್ಲಿ 10 ಮತ್ತು 12ನೇ ತರಗತಿ ಶಾಲೆಗಳು ಪುನರಾರಂಭಿಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಿಗೆ ಕೊರೋನಾ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ. ಆನ್ ಲೈನ್ ಹಾಗೂ ಆಫ್ ಲೈನ್ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ಹಾಜರಾಗುವ ಅವಕಾಶವನ್ನೂ ಕೂಡ ನೀಡಲಾಗಿದೆ ಎಂದರು.

ಮಹತ್ವದ ನಿರ್ಧಾರಗಳು

  • ತರಗತಿ ಬರುವುದು ಕಡ್ಡಾಯವಲ್ಲ
  • ಸೋಂಕಿನ ಲಕ್ಷಣಗಳು ಇದ್ದರೆ ಮಾತ್ರ ‌ಕೊರೋನಾ ಟೆಸ್ಟ್.
  • ಪೋಷಕರ ಅನುಮತಿ ಪತ್ರ ಬೇಕು.
  • ವಾರದಲ್ಲಿ ಮೂರನೇ ದಿನ ವಿದ್ಯಾಗಮ ತರಗತಿಗಳು.
  • ವಿದ್ಯಾಗಮ ತರಗತಿಗಳಿಗೆ ಕೇವಲ 15 ಮಕ್ಕಳಿಗೆ ಮಾತ್ರ ಅವಕಾಶ
  • ವಿದ್ಯಾರ್ಥಿಗಳಿಗೆ ದಾಖಲಾತಿ ಕಡ್ಡಾಯವಲ್ಲ.
  • ಮಕ್ಕಳನ್ನು ತರಗತಿಗೆ ಕಳಿಸಬೇಕು ಎಂಬ ಒತ್ತಾಯವಿಲ್ಲ.
Share This Article
Leave a comment