ಅವನು ಲಾಟೀನು ಬೆಳಕಿನಿಂದ ಆ ಕೆಸರು ಕೊಳದೊಳಗೆ ಕಣ್ಣಾಯಿಸಿದ. ಯಾವುದೋ ಮಗು ಇದರೊಳಗೆ ಅವಿತು ಹೋಗುತ್ತಿದೆ , ಹೇಗಾದರೂ ಆ ಮಗುವನ್ನು ಹೊರ ತೆಗೆಯಬೇಕು ಎಂದು, ತನ್ನ ಎತ್ತುಗಳ ಕೊರಳಿಗೆ , ತನ್ನ ಹೆಗಲಲ್ಲಿದ್ದ ನೇಗಿಲು ಕಟ್ಟಿ, ಆ ನೇಗಿಲಿಗೆ ತನ್ನಲ್ಲಿರುವ ಹಗ್ಗವನ್ನು ಕಟ್ಟಿ, ಕೆಸರಿನೊಳಗೆ ಇಳಿದು , ಕೈಯಿಂದ ಆ ಮಗುವನ್ನು ಗಟ್ಟಿಯಾಗಿ ಬಿಗಿದಿಡಿದು, ಎತ್ತುಗಳಿಗೆ ಕಟ್ಟಿದ ,ತನ್ನ ಕೈಯಲ್ಲಿರುವ ಹಗ್ಗ ರಭಸವಾಗಿ ಎಳೆಯುತ್ತಾನೆ. ಆ ರಭಸಕ್ಕೆ ಎತ್ತುಗಳು ರೈತ ಮುಂದಕ್ಕೆ ಹೋಗುವ ಸನ್ನೆ ಕೊಟ್ಟಿದ್ದಾನೆಂದು , ಮುನ್ನಡೆಯುತ್ತದೆ. ಎಲ್ಲಾ ಶಕ್ತಿಯಿಂದ ಆ ಎತ್ತು ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದಂತೆಯೇ ಫ್ಲೆಮಿಂಗ್ ಮಗುವನ್ನು ಹಿಡಿದು ಮೇಲೆ ಬರುತ್ತಾನೆ.
ಆ ಗಂಡು ಮಗುವನ್ನು ತನ್ನ ಮನೆಗೆ ಕರೆದುಕೊಂಡು ಬಂದು ಸ್ನಾನ ಮಾಡಿಸಿ, ಆಹಾರ ಕೊಟ್ಟು ಉಪಚರಿಸುತ್ತಾನೆ. ಹುಡುಗ ತನ್ನ ಹೆಸರು ವಿನ್ಸೆಂಟ್ ಎನ್ನುತ್ತಾನೆ. ತನ್ನ ಮಗ ಅಲೆಕ್ಸಾಂಡರನಿಗೆ ಆ ಹುಡುಗನೊಂದಿಗೆ ಸ್ವಲ್ಪ ಹೊತ್ತು ಆಟವಾಡಲು ಫ್ಲೆಮಿಂಗ್ ಹೇಳುತ್ತಾನೆ.
ನಂತರ ಆ ಹುಡುಗ ವಿನ್ಸೆಂಟ್ ತನಗೆ ತನ್ನ ಮನೆಯ ದಾರಿ ಗೊತ್ತು. ನಾಳೆ ಆಟವಾಡಲು ಇಲ್ಲೇ ಬರುವೆ ಎಂದು ಓಡಿ ಹೋಗುತ್ತಾನೆ.
ಅಂದೇ ಸಂಜೆ ಫ್ಲೆಮಿಂಗ್ ಗುಡಿಸಲು ಮನೆಯ ಮುಂದೆ ಒಂದು ಕುದುರೆಗಾಡಿ ಬರುತ್ತದೆ. ಆ ಗಾಡಿಯ ಒಳಗಿನಿಂದ ಆ ಪ್ರಾಂತ್ಯದ ಆಗರ್ಭ ಶ್ರೀಮಂತ ರಾಂಡೋಮ್ ಇಳಿದು ಬಂದು, ಫ್ಲೆಮಿಂಗ್ ನನ್ನು ಅಪ್ಪಿ, ” ನೀವು ನನ್ನ ಮಗನ ಜೀವ ರಕ್ಷಿಸಿದೆ, ನಿಮ್ಮ ಈ ಉಪಕಾರಕ್ಕೆ ನಾನು ಒಂದು ಪಾರಿತೋಷಿಕೆ ಕೊಡಲೇ ಬೇಕು… ನೋಡಿ ಆ ಐದು ಕುದುರೆ ಗಾಡಿಯಲ್ಲಿ ಎಲ್ಲಾ ರೀತಿಯ ಚಿನ್ನ ಬೆಳ್ಳಿ ವೈಡ್ಯೂರ ನಿನಗಾಗಿ ತಂದಿರುವೆ, ಸ್ವೀಕರಿಸು” ಎಂದ.
ಫ್ಲೆಮಿಂಗ್ ” ನನಗೆ ನನ್ನದೇ ಆದ ಕೆಲಸಗಳು ಇವೆ. ಈ ಪಾರಿತೋಷಕಗಳು ನನಗೆ ಅಗತ್ಯವಿಲ್ಲ” ಎನ್ನುತ್ತಾ, ಆ ಪಾರಿತೋಷಗಳನ್ನು ಶತಯಾ ಗತಯಾ ನಿರಕಾರಿಸಿ ಸ್ವೀಕರಿಸಲೇ ಇಲ್ಲ. ಬಹಳಾ ದುಃಖದಿಂದ ರಾಂಡೋಮ್ ಮರಳುವಾಗ, ಫ್ಲೇಮಿಂಗಿನ ಗುಡಿಸಲಿನಿಂದ ಅವನ ಮಗ ಅಲೆಕ್ಸಾಂಡರ್ ಹೊರ ಬರುವುದು ಕಂಡ .
ರಾಂಡೋಮ್: ” ಇದು ನಿನ್ನ ಮಗನೇ?”
ಫ್ಲೆಮಿಂಗ್: ಹೌದು… ಅವನ ಹೆಸರು ಅಲೆಕ್ಸಾಂಡರ್”
ರಾಂಡೋಮ್: ” ಇವನಿಗೆ ವಿದ್ಯಾಭ್ಯಾಸ?”
ಫ್ಲೆಮಿಂಗ್: ” ಏನೂ ಇಲ್ಲ ನನ್ನ ಜೊತೆ ಗದ್ದೆಯಲ್ಲಿ ಕೆಲಸ, ಮನೆಯಲ್ಲಿ ಹೆಂಡತಿಗೆ ಸಹಾಯ… ಹೀಗೆ…. ಒಬ್ಬ ಶ್ರಮಜೀವಿ ಅವನು” ಎಂದು ನಗು ನಗುತ್ತಾ ಹೇಳಿದ.
ರಾಂಡೋಮ್, ಫ್ಲಮಿಂಗನ ಕೈ ಹಿಡಿದು ವಿನಂತಿಸಿದ ” ನೋಡು ಮಿಸ್ಟರ್ ಫ್ಲೆಮಿಂಗ್, ನನಗೆ ನಿನ್ನ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲು ಅವಕಾಶ ಕೊಡಲೇಬೇಕು. ನೀನು ಹೇಗೆ ನನ್ನ ಮಗನ ಜೀವ ಉಳಿಸಿದೆಯೋ, ಹಾಗೆಯೇ ನಿನ್ನ ಮಗನಿಗೆ ನನ್ನ ಪರವಾಗಿ ವಿದ್ಯಾಭ್ಯಾಸದ ಅನುಕೂಲ ಮಾಡುವ ಅವಕಾಶ ಕೊಡಲೇ ಬೇಕು. ನಿನ್ನ ಹಾಗೆ ಅವರಲ್ಲೂ ಸಾಮಾಜಿಕ ಜವಾಬ್ದಾರಗಳಮೌಲ್ಯ ಹುದುಗಿರುತ್ತದೆ. ಒಳ್ಳೆಯ ವಿದ್ಯಾಭ್ಯಾಸ ಕೊಟ್ಟರೆ ಅವನು ಇನ್ನೂ ಬೆಳೆಯುತ್ತಾನೆ. ” ಎಂದು ಹಠ ಹಿಡಿದ. ಕೊನೆಗೆ ರಾಂಡೋಮನ ಹಠಕ್ಕೆ ಮಣಿದು, ಫ್ಲೆಮಿಂಗ್ ತನ್ನ ಮಗನನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿದ.
ಅಲೆಕ್ಸಾಂಡರ್ ಲಂಡನ್ನಿನ ಕನಸಲ್ಲೂ ನೆನೆಯದ ಪ್ರತಿಷ್ಠಿತ ವಿದ್ಯಾಕೇಂದ್ರಗಳಲ್ಲಿ ಉನ್ನತ ಮಟ್ಟದ ವ್ಯಾಸಂಗ ಮಾಡುವ ಅವಕಾಶ ಸಿಕ್ಕಿತು. ಅಲೆಕ್ಸಾಂಡರ್ ಬಹಳಾ ಶ್ರಮ ಪಟ್ಟು ಕಲಿತ, ಒಳ್ಳೆಯ ಅಂಕಗಳಿಂದ ಶ್ರೇಣಿಯನ್ನು ಪಡೆದ. ರಾಂಡೋಮಿಗೆ, ಅಲೆಕ್ಸಾಂಡರನಿಗೆ ವಿದ್ಯಾಭ್ಯಾಸ ಕೊಡಿಸಿದ್ದು ಗರ್ವವಾದ ಸಂತೋಷ ತಂದಿತು.
ವರುಷಗಳು ಕಳೆಯಿತು. ವಿನ್ಸೆಂಟನ ಮಗನಿಗೆ ಸೋಂಕು ರೋಗ ಬಂದು ಮರಣದ ಹತ್ತಿರ ತಲುಪುತ್ತಿದ್ದ. ಆದರೆ ಅಲೆಕ್ಸಾಂಡರ್ ಅಂದು ಒಬ್ಬ ವೈದ್ಯನಾಗಿದ್ದ ಅವನು ಕಂಡು ಹುಡುಕಿದ ಔಷಧಿಯಿಂದ ವಿನ್ಸೆಂಟನ ಮಗ ಮರುಜೀವ ಪಡೆದ!!!!
ಯಾರಿದು ಅಲೆಕ್ಸಾಂಡರ್ ?
ಯಾರಿದು ವಿನ್ಸೆಂಟ್?
ಅಲೆಕ್ಸಾಂಡರ್ ಫ್ಲೆಮಿಂಗ್ ಸೋಂಕು ಮುಕ್ತತೆಗೆ ಪೆನ್ಸಿಲಿನ್ ಉಪಯೋಗಿಸಬಹುದು ಎಂದು ಕಂಡು ಹಿಡಿದ ಮಹಾನ್ . ಆ ಪೆನ್ಸಿಲಿನ್ ಔಷಧಿಯಿಂದ ವಿನ್ಸಂಟನ ಮಗ, ಆ ದೇಶದ ಜನತೆ, ಪ್ರಪಂಚದ ಮಾನವಕುಲ ರೋಗಮುಕ್ತವಾಯಿತು. ಇಂದೂ ಮುಂದೂ ರೋಗ ಮುಕ್ತವಾಗಿದೆ.
ಹಾಗೂ
ವಿನ್ಸೆಂಟ್ ಚರ್ಚಿಲ್ ಬೇರೆ ಯಾರೂ ಅಲ್ಲ,
ಚರಿತ್ರೆಯಲ್ಲಿ ತನ್ನದೇ ಚಾಪು ಮೂಡಿಸಿದ ಸುಪ್ರಸಿದ್ದ ಬ್ರಿಟೀಷ್ ಪ್ರಧಾನಿ.
ನಿಜವಾದರೂ ಸುಳ್ಳಾದರೂ ಈ ಕಥೆಯಲ್ಲೊಂದು ಸಂದೇಶ ಇದೆ
ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡಲು ಸಾಧ್ಯವಾದರೆ ಒಳ್ಳೆಯದು. ಪ್ರತ್ಯುಪಕಾರವನ್ನು ಸದುಪಯೋಗ ಪಡಿಸುವುದೂ ಕೂಡಾ ಅಮೂಲ್ಯ.
ಯಾರಿಗೂ ಉಪಕಾರ ಮಾಡಲು ಸಾಧ್ಯವಾಗದಿದ್ದರೂ, ಉಪದ್ರವವನ್ನು ಮಾತ್ರ ಮಾಡಬಾರದು. ಕಾರಣ….
ಮನುಷ್ಯ ಜೀವನ ಒಂದೇ ಒಂದು ಬಾರಿ ಸಿಗುವುದು, ಅದನ್ನು ಸದಾವಕಾಶವಾಗಿ ಉಪಯೋಗಿಸುವುದು ಅತ್ಯಮೂಲ್ಯ.
ಅಮೂಲ್ಯ -ಅತ್ಯಮೂಲ್ಯಗಳ ನಡುವಿನ ಜೀವನ ನಿಮ್ಮದಾಗಲಿ.
ಶುಭವಾಗಲಿ.
ಪ್ರೊ. ರೂಪೇಶ್
ಪುತ್ತೂರು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು