ಮಂಡ್ಯದ ಮಹಾವೀರ ವೃತ್ತದ ಬಳಿ ಕೆಆರ್ ಪೇಟೆ ಯಿಂದ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ತಂದೆ-ತಾಯಿ ಬೈಕ್‍ನಲ್ಲಿ ತಮ್ಮ ಮಗುವನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ಜರುಗಿದೆ.
ಬೈಕ್‍ನ್ನು ಪೊಲೀಸರು ಅಡ್ಡಗಟ್ಟಿದ ವೇಳೆ ಬೈಕ್‍ನಲ್ಲಿ ಇದ್ದ ಮಗುವಿನ ತಂದೆ, ಸರ್.. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾ ಇದ್ದೀವಿ ಬಿಡಿ ಸಾರ್ ಎಂದಿದ್ದಾರೆ. ಈ ವೇಳೆ ಪೊಲೀಸರು, ಹೆಲ್ಮೆಟ್ ಎಲ್ಲಿ ಮೊದಲು ಫೈನ್ ಕಟ್ಟು ಎಂದು ಬೈಕ್ ಕೀಯನ್ನು ಕಿತ್ತುಕೊಂಡಿದ್ದಾರೆ.
ನಂತರ ಸರ್ ನಿಜವಾಗಲೂ ಹಣವಿಲ್ಲ ಸರ್ ಆಸ್ಪತ್ರೆಗೆ ಹೋಗಬೇಕು ಬಿಡಿ ಸಾರ್ ಎಂದು ಮತ್ತೆ ಹೇಳಿದ್ದಾರೆ.
ಇಷ್ಟಾದ್ರು ಸಹ ಮಾನವೀಯತೆ ಮರೆತಿರುವ ಪೊಲೀಸರು ಬೈಕ್‍ನ ಕೀ ಕೊಡುವುದಿಲ್ಲ. ಬಳಿಕ ಸ್ನೇಹಿತರಿಗೆ ಹಣ ಹಾಕಿ ಎಂದು ಕೇಳುತ್ತಿದ್ದರೆ, ಇತ್ತ ಪತ್ನಿ ಮಗುವನ್ನು ಎತ್ತಿಕೊಂಡು ಫುಟ್‍ಪಾತ್‍ನಲ್ಲಿ ಕೂತಿದ್ರು. ನಂತರ ಸ್ನೇಹಿತರ ಬಳಿ ಗೂಗಲ್ ಪೇಮಾಡಿಸಿಕೊಂಡು ಎಟಿಎಂನಲ್ಲಿ ಹಣ ಡ್ರಾ ಮಾಡಿ ಫೈನ್ ಕಟ್ಟಿದ ಬಳಿಕ ಪೊಲೀಸರು ಬೈಕ್ ಕೀ ಕೊಟ್ಟರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ