Karnataka

ಐದು ಗ್ಯಾರಂಟಿ ಯೋಜನೆ’ ಜಾರಿ – ಸಿಎಂ ಸಿದ್ಧರಾಮಯ್ಯ ಘೋಷಣೆ

ವಿಧಾನಸೌಧದ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಅಪಾರವಾದ ನಂಬಿಕೆ ಇಟ್ಟು ನಮಗೆ ಅವಕಾಶ ಕೊಟ್ಟಿದ್ದಾರೆ. ನುಡಿದಂತೆ ನಡೆಯುವವರು ನಾವು. ನಾವು ಅಧಿಕಾರ ತೆಗೆದುಕೊಂಡ ಮೊದಲ ದಿನದಿಂದ ಏನು ಮಾತನಾಡಿದ್ದೇವೆ ಆ ಮಾತಿಗೆ ಬದ್ಧರಾಗಿದ್ದೇವೆ ಎಂಬುದಾಗಿ ಹೇಳಿದರು.

ಸಿಎಂ ಸಿದ್ಧರಾಮಯ್ಯ ಅವರು, ನಾವು ವಿಧಾನಸಭಾ ಚುನಾವಣೆ ಸಂದರ್ಭಕ್ಕೂ ಮುಂಚೆ ನಮ್ಮ ಪಕ್ಷದ ವತಿಯಿಂದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ನಾನು ಮತ್ತು ನಮ್ಮ ಅಧ್ಯಕ್ಷರಾದಂತ ಡಿಕೆ ಶಿವಕುಮಾರ್ ಗ್ಯಾರಂಟಿ ಕಾರ್ಡ್ ಗಳಿಗೆ ನಮ್ಮ ಸಹಿ ಕೂಡ ಮಾಡಿದ್ದೆವು. ನಾವು ಗ್ಯಾರಂಟಿಯಾಗಿ, ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಜನರಿಗೆ ತಲುಪಿಸುತ್ತೇವೆ ಅಂತ ಮಾತುಗಳನ್ನು ಗ್ಯಾರಂಟಿ ಕಾರ್ಡ್ ಗಳನ್ನು ನಮ್ಮ ಕಾರ್ಯಕರ್ತರ ಮೂಲಕ ಎಲ್ಲ ಮನೆಗಳಿಗೆ ಹಂಚಿಸಲಾಗಿತ್ತು ಎಂದರು.

ನಾವು ಬಹಳ ಸುಧೀರ್ಘವಾಗಿ ಐದು ಗ್ಯಾರಂಟಿಗಳನ್ನು ಚರ್ಚೆ ಮಾಡಿದ್ದೇವೆ. ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ ಐದು ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಕೊಡಬೇಕು ಎಂಬುದಾಗಿ ತೀರ್ಮಾನ ಮಾಡಿದ್ದೇವೆ. ಅದು ಯಾವುದೇ ಜಾತಿ, ಯಾವುದೇ ಧರ್ಮ, ಯಾವುದೇ ಭಾಷೆ ಇವು ಯಾವುದು ಇಲ್ಲದೆ ಎಲ್ಲಾ ಜಾತಿ, ಧರ್ಮ, ಭಾಷೆಯವರಿಗೆ ಕರ್ನಾಟಕದ ಜನರಿಗೆ, ಜನತೆಗೆ ಈ ಗ್ಯಾರಂಟಿಗಳನ್ನು ತಲುಪಿಸುತ್ತೇವೆ. ಜಾರಿಗೆ ಕೊಡುತ್ತೇವೆ ಎಂದರು.

  • ಜುಲೈ ತಿಂಗಳಿನಿಂದ 200 ಯೂನಿಟ್ ವರೆಗೆ ವಿದ್ಯುತ್ ಉಚಿತ
  • ಆಗಸ್ಟ್ 15ರಂದು ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳು ರೂ.2,000 ಹಣ ಖಾತೆಗೆ ಜಮಾ.
  • ಜುಲೈ.1ರಿಂದ ಬಿಪಿಎಲ್, ಎಪಿಎಲ್ ಕಾರ್ಡ್ ನ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ.
  • ಜೂನ್ 11ರಿಂದ ಎಸಿ, ಸ್ಲೀಪರ್ ಹಾಗೂ ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ.
  • ಯುವನಿಧಿ ಯೋಜನೆಯ ಅಡಿಯಲ್ಲಿ ಪದವೀಧರರಿಗೆ ರೂ.3000, ಡಿಪ್ಲೋಮಾದವರಿಗೆ ರೂ.1,500 ಮುಂದಿನ 24 ತಿಂಗಳವರೆಗೆ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ.
Team Newsnap
Leave a Comment
Share
Published by
Team Newsnap

Recent Posts

ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು

ನಮ್ಮ ಪೋಲಿಸರು ಸಮರ್ಥರಿದ್ದಾರೆ ⁠ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More

May 10, 2024

ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More

May 10, 2024

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ

ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More

May 10, 2024

ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More

May 10, 2024

ಪ್ರಜ್ವಲ್ ವಿರುದ್ಧ ಮೂರನೇ ಎಫ್ ಐ ಆರ್ ದಾಖಲಿಸಲು ಎಸ್ ಐಟಿ ಸಿದ್ದತೆ

ಬೆಂಗಳೂರು:ಪೆನ್‍ಡ್ರೈವ್ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು… Read More

May 10, 2024

ವಿಚಾರವಾದಿ ದಾಭೋಲ್ಕರ್ ಹತ್ಯೆಗೈದ ಇಬ್ಬರಿಗೆ ಜೀವಾವಧಿ ಶಿಕ್ಷೆ

ಪುಣೆ : ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆಗೈದಿದ್ದ ಇಬ್ಬರಿಗೆ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ ಜೀವಾವಧಿ ಶಿಕ್ಷೆ… Read More

May 10, 2024