December 22, 2024

Newsnap Kannada

The World at your finger tips!

dks

ಅಕ್ರಮ ಹಣ ವರ್ಗಾವಣೆ : ಡಿಕೆಶಿ ಸೇರಿ ಐವರಿಗೆ ಜುಲೈ 1 ರಂದು ಕೋರ್ಟ್ ಹಾಜರಿಗೆ ಸಮನ್ಸ್

Spread the love

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಐದು ಮಂದಿಗೆ ದೆಹಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಜುಲೈ 1 ರಂದು ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿದೆ.

ಇದನ್ನು ಓದಿ –ಕುವೆಂಪು ಅವಮಾನಿಸಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರದ್ದಿಗೆ ಚಲುವರಾಯಸ್ವಾಮಿ ಆಗ್ರಹ

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಹಾಗೂ ಇತರೆ ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದರು.

ಚಾರ್ಜ್ ಶೀಟ್ ಅನ್ವಯ ಇತರೆ ಆರೋಪಿಗಳಾದ ಸಚಿನ್ ನಾರಯಣ್, ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ, ರಾಜೇಂದ್ರಗೆ ಸಮನ್ಸ್ ಜಾರಿ ಮಾಡಲಾಗಿದೆ.

ಕಳೆದ ಶುಕ್ರವಾರ ಪ್ರಕರಣ ವಿಚಾರಣೆ ನಡೆಸಿದ್ದ ಕೋರ್ಟ್, ಚಾರ್ಜ್‍ಶೀಟ್‍ನಲ್ಲಿ IPC 120B (ವ್ಯವಸ್ಥಿತ ಸಂಚು) ಸೇರ್ಪಡೆ ಬಗ್ಗೆ ಸ್ಪಷ್ಟನೆ ಕೇಳಿತ್ತು.

ಇದಕ್ಕೆ ಇಡಿ ಪರ ವಾದ ಮಂಡಿಸಿದ್ದ ವಕೀಲರು, ಕರ್ನಾಟಕ ಸೇರಿದಂತೆ ಮೂರು ಹೈಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ, 120B (ವ್ಯವಸ್ಥಿತ ಸಂಚು) ಇಡಿ ಪ್ರಕರಣಗಳಲ್ಲಿ ಸೇರಿಸಿ ವಿಚಾರಣೆ ನಡೆಸಬಹುದು ಎಂದು ಹೇಳಿದ್ದರು. ಈ ವಾದವನ್ನು ಪರಿಗಣಿಸಿರುವ ಕೋರ್ಟ್ ಬೇಸಿಗೆ ರಜೆಯ ಬಳಿಕ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದೆ.

Copyright © All rights reserved Newsnap | Newsever by AF themes.
error: Content is protected !!