December 24, 2024

Newsnap Kannada

The World at your finger tips!

sumalath l

ಮಂಡ್ಯದಲ್ಲಿ 2500 ಎಕರೆ ಅರಣ್ಯ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ :ಸಂಸದೆ ಸುಮಲತಾ ಕಳವಳ-ಕ್ರಮಕ್ಕೆ ಒತ್ತಾಯ

Spread the love

ರಾಜ್ಯದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯ ಅರಣ್ಯ ಭೂಮಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಕೂಡಲೇ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಕುರಿತು ಸಂಸದೆ ಸುಮಲತಾ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದರು.

ಈ ಕುರಿತಂತೆ ಲೋಕಸಭೆಯಲ್ಲಿನ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಜಾವಡೇಕರ್ ಅವರನ್ನು ಪ್ರಶ್ನೆ ಮಾಡಿದ ಸಂಸದೆ ಸುಮಲತಾ, ಪರಿಸರ ಮತ್ತು ಅರಣ್ಯ ಭೂಮಿ ಕಾಪಾಡುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಈ ಕಳಕಳಿಯಿಂದ ತಾವು ಈ ಪ್ರಶ್ನೆಯನ್ನು ಕೇಳುವುದಾಗಿ ಸಭಾಧ್ಯಕ್ಷರ ಬಳಿ ತಮ್ಮ ಕಾಳಜಿ ಹೇಳಿಕೊಂಡರು.

ಮಂಡ್ಯ ಜಿಲ್ಲೆಯ ಸುಮಾರು 2500 ಎಕರೆ ಅರಣ್ಯ ಭೂಮಿಯಲ್ಲಿ ಅಕ್ರಮ ಗಣಿ ಮತ್ತು ಕ್ರಷರ್ ಗಳು ನಡೆಯುತ್ತಿವೆ. ಇದರಿಂದ ಅರಣ್ಯ ಭೂಮಿಯೂ ನಾಶವಾಗುತ್ತದೆ. ಅಲ್ಲದೇ ಪರಿಸರದ ಮೇಲೂ ಅಗಾಧ ಪರಿಣಾಮ ಬೀರುತ್ತದೆ. ಹೀಗಾಗಿ ಕೇಂದ್ರ ಸರ್ಕಾರ, ಅರಣ್ಯ ಭೂಮಿಯಲ್ಲಿನ ಅಕ್ರಮ ಗಣಿಗಾರಿಕೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂಬುದನ್ನು ತಿಳಿಸುವಂತೆ ಸ್ಪೀಕರ್ ಅವರ ಮೂಲಕ ಸಚಿವರನ್ನು ಕೋರಿದರು.

ಸಂಸದೆ ಸುಮಲತಾ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಜಾವಡೇಕರ್ , ಅಕ್ರಮ ಗಣಿಗಾರಿಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಸಂಬಂಧ ಜವಾಬ್ದಾರಿ ಸಂಪೂರ್ಣ ರಾಜ್ಯ ಸರ್ಕಾರದ್ದಾಗಿದೆ ಎಂದರು.

ಈಗಗಾಲೇ ರಾಜ್ಯ ಸರ್ಕಾರ ಕೂಡ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಇಲ್ಲ ಎಂದು ಹೇಳಿದೆ. ಆದರೂ ಸಹ ಅಂತಹ ಗಣಿಗಾರಿಕೆ ಕಂಡು ಬಂದರೆ ಭಾರಿ ಪ್ರಮಾಣದ ದಂಡ ವಿಧಿಸಲಾಗುವುದು. ಅಲ್ಲದೆ ಅಕ್ರಮ ಗಣಿಗಾರಿಕೆ ಒಂದು ಕ್ರಿಮಿನಲ್ ಪ್ರಕರಣ ಎಂದು ದಾಖಲಿಸಲಾಗುವುದು ಎಂದು ಸಚಿವರು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!