March 14, 2025

Newsnap Kannada

The World at your finger tips!

mysore university

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕೋಟ್ಯಂತರ ಅಕ್ರಮ – ದಾಖಲೆ ಬಿಡುಗಡೆ ಮಾಡಿದ ಕಾನೂನು ವಿದ್ಯಾರ್ಥಿ

Spread the love

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ನಲ್ಲಿ ಕೋಟ್ಯಾಂತರ ರೂಪಾಯಿಗಳ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೇ ಮತ್ತು ಅವರ ಸಿಬ್ಬಂದಿ ವಿರುದ್ಧ ಅಕ್ರಮಗಳ ಆರೋಪ ಹೊರಿಸಲಾಗಿದೆ.

ಈ ಅಕ್ರಮದ ದಾಖಲೆಗಳನ್ನು ಕಾನೂನು ವಿದ್ಯಾರ್ಥಿ ಪುಟ್ಟಸ್ವಾಮಿ ಬಹಿರಂಗಪಡಿಸಿದ್ದು, ವಿಶ್ವವಿದ್ಯಾಲಯದಲ್ಲಿ ನಡೆದ ಹಣಕಾಸು ದುರ್ಬಳಕೆಯ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಅಕ್ರಮ ಖರ್ಚುಗಳ ವಿವರ:

  • ವರ್ಚುಯಲ್ ಟೂರ್ ಫೋಟೋಗ್ರಾಫಿ: KSOU ಕಟ್ಟಡದ ವರ್ಚುಯಲ್ ಟೂರ್ ಫೋಟೋಗ್ರಾಫಿಕ್ ಬಿಲ್‌ಗಾಗಿ ₹96,91,812 ಲೆಕ್ಕ ಹಾಕಲಾಗಿದೆ. ಇದರಲ್ಲಿ ಮೈಸೂರು ಕಟ್ಟಡಕ್ಕೆ ಮಾತ್ರ ₹26,15,000 ಹಾಗೂ ಇತರ 11 ಕಟ್ಟಡಗಳ ಫೋಟೋಗ್ರಾಫಿಗೆ ತಲಾ ₹4 ಲಕ್ಷ ಮತ್ತು ₹5 ಲಕ್ಷ ಲೆಕ್ಕವಿದೆ.
  • ಎಲ್‌ಇಡಿ ಬಲ್ಬ್ ಖರೀದಿ: KSOU ಕಟ್ಟಡದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲು ₹2 ಕೋಟಿ ರೂಪಾಯಿ ಬಿಲ್ ಮಾಡಲಾಗಿದೆ.
  • ಹಾಸಿಗೆ-ದಿಂಬಿ ಖರೀದಿ: KSOU ವಸತಿಗೃಹದ ಹಾಸಿಗೆ ಮತ್ತು ದಿಂಬಿಗೆ ₹15 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
  • ಕಂಪ್ಯೂಟರ್ ಖರೀದಿ: ವಿಶ್ವವಿದ್ಯಾಲಯ 40,000 ಕಂಪ್ಯೂಟರ್‌ಗಳನ್ನು ಖರೀದಿಸಿದ್ದಾಗಿ ಹೇಳಲಾಗಿದ್ದು, ಪ್ರತಿ ಕಂಪ್ಯೂಟರ್‌ಗೆ ₹97,150 ಲೆಕ್ಕ ಹಾಕಲಾಗಿದೆ.
  • ಪುಸ್ತಕ ಬ್ಯಾಗ್ ಖರೀದಿ: ವಿದ್ಯಾರ್ಥಿಗಳಿಗೆ ನೀಡಲಾದ ಪುಸ್ತಕ ತುಂಬಿಕೊಳ್ಳುವ ಬ್ಯಾಗ್‌ಗಳಿಗೆ ₹60 ಲಕ್ಷ ರೂಪಾಯಿ ಲೆಕ್ಕ ಹಾಕಲಾಗಿದೆ.
  • ಕಿಟಕಿ ಬದಲಾವಣೆ: KSOU ಮಾನಸ ಕಟ್ಟಡದ ಕಿಟಕಿಗಳನ್ನು ಬದಲಾಯಿಸಲು ₹7 ಕೋಟಿ ರೂಪಾಯಿ ಲೆಕ್ಕ ಹಾಕಲಾಗಿದೆ.ಇದನ್ನು ಓದಿ – ಬ್ಯಾಂಕುಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ವಿಜಯ್ ಮಲ್ಯ: ಹೆಚ್ಚುವರಿ ಹಣ ವಸೂಲಿಸಿದ ಆರೋಪ!

ಈ ಅಕ್ರಮಗಳ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಇನ್ನಷ್ಟು ತನಿಖೆಯ ಅಗತ್ಯವಿದೆ ಎಂದು ವೃತ್ತಪತ್ರಿಕಾಗಳ ವರದಿ ತಿಳಿಸಿದೆ.

Copyright © All rights reserved Newsnap | Newsever by AF themes.
error: Content is protected !!