ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್. ಒಬ್ಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ. ಕೆಲವು ಬಿಜೆಪಿ ಕೆಲ ನಾಯಕರು ಸಲಿಂಗ ಕಾಮಿಗಳು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಇಂದು ವಾಗ್ದಾಳಿ ಮಾಡಿದರು
ಸುದ್ದಿಗಾರರ ಜೊತೆ ಮಾತನಾಡಿದ ಲಕ್ಷ್ಮಣ್ ನಿಮ್ಮ ಸಾಧನೆಗಳು ಇದ್ರೆ ಅದರ ಬಗ್ಗೆ ಚರ್ಚೆ ಮಾಡಬೇಡಿ. ಅದನ್ನು ಬಿಟ್ಟು ಈ ರೀತಿ ನೀವು ಮಾತಾಡಬೇಡಿ ಎಂದು ಹೇಳಿದರು.
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಕಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, ನಳಿನ್ ಒಬ್ಬ ಅಯೋಗ್ಯ, ಅನ್ ಕಲ್ಚರಲ್ ಬ್ರೂಟ್. ಒಬ್ಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದವ. ಅವನು ನಮ್ಮ ನಾಯಕರಿಗೆ ಸಟಿ೯ಫೀಕೆಟ್ ಕೊಡುತ್ತಾರಾ ಎಂದು ಪ್ರಶ್ನೆ ಮಾಡಿದರು.
ಸಲಿಂಗ ಕಾಮಿಗಳು:
ನಿಮ್ಮ ಮೋದಿ 7 ವರ್ಷದಲ್ಲಿ 84 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದನ್ನ ಬಿಟ್ಟು ಬೇರೆ ಏನೇನೋ ಚರ್ಚೆ ಮಾಡ್ತಿರಲ್ಲ. ರಾಜ್ಯ ಬಿಜೆಪಿಯಲ್ಲಿ 17 ಮಂದಿ ಬೇಲ್ ಮೇಲೆ ಇದ್ದಾರೆ. ರೇಣುಕಾಚಾರ್ಯ, ಸದಾನಂದಗೌಡ, ಪ್ರತಾಪ್ ಸಿಂಹ ರಂತಹ ಅನೇಕ ಮಹಿಳಾ ಪೀಡಕರು ಇದ್ದಾರೆ. ಅರವಿಂದ ಲಿಂಬಾವಳಿ, ಯತ್ನಾಳ್ ರಂತಹ ಸಲಿಂಗಕಾಮಿಗಳು ಇದ್ದಾರೆ. ತಮ್ಮಲ್ಲೇ ಹುಳುಕು ಇಟ್ಕೊಂಡು ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದೀರಿ. ಒಬ್ಬ ಅಧ್ಯಕ್ಷರ ಮೇಲೆ ಆರೋಪ ಮಾಡುವ ಮೊದಲು ಯೋಚನೆ ಮಾಡಿ ಮಾತನಾಡಿ ಎಂದು ಲಕ್ಷ್ಮಣ್ ಆಕ್ರೋಶ ಹೊರಹಾಕಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್