December 24, 2024

Newsnap Kannada

The World at your finger tips!

OLD VEHICLE

ಹಳೆಯ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಿದರೆ ಶೇ. 5 ರಷ್ಟು ರಿಯಾಯಿತಿ

Spread the love

ಹಳೆಯ ವಾಹನ ಗುಜರಿಗೆ ಹಾಕಿ, ಹೊಸ ವಾಹನ ಖರೀದಿಸಲು ಆಲೋಚಿಸುತ್ತಿರುವವರಿಗೆ ಕೇಂದ್ರ ಬಂಪರ್ ಕೊಡುಗೆ ನೀಡಿದೆ.

ಹಳೆಯ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡುವವರಿಗೆ ಆಟೊಮೊಬೈಲ್‌ ಕಂಪನಿಗಳು ಶೇ. 5 ರಷ್ಟು ರಿಯಾಯಿತಿ ನೀಡಲಿವೆ.

ಈ ವಿಷಯವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿ ವಾಹನಗಳನ್ನು ಸ್ವಇಚ್ಛೆಯಿಂದ ಗುಜರಿಗೆ ಹಾಕುವ ನೀತಿಯನ್ನು ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದಿದ್ದಾರೆ.

ಈ ನೀತಿಯು ದೇಶದ ಆಟೊಮೊಬೈಲ್‌ ಉದ್ಯಮದ ಪಾಲಿಗೆ ವರ. ದೇಶದ ಅತ್ಯಂತ ಲಾಭದಾಯಕ ಉದ್ಯಮ ಎಂದಿದ್ದಾರೆ.‌

ಆಟೊಮೊಬೈಲ್‌ ಉದ್ಯಮದ ವಾರ್ಷಿಕ ವಹಿವಾಟು ಈಗ ₹ 4.5 ಲಕ್ಷ ಕೋಟಿ. ಈ ನೀತಿಯ ಕಾರಣದಿಂದಾಗಿ ಮುಂದಿನ ವರ್ಷಗಳಲ್ಲಿ ವಹಿವಾಟಿನ ಮೊತ್ತವು ₹ 10 ಲಕ್ಷ ಕೋಟಿಗೆ ಹೆಚ್ಚಳ ಆಗಬಹುದು.
ಹೊಸ ನೀತಿಯ ಪರಿಣಾಮವಾಗಿ ₹ 10 ಸಾವಿರ ಕೋಟಿಯಷ್ಟು ಹೂಡಿಕೆ ಆಗಲಿದೆ, 50 ಸಾವಿರ ಉದ್ಯೋಗ ಸೃಷ್ಟಿ ಕೂಡ ಆಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!