ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದಾಗಿ ಹೇಳಿದ್ದಾರೆ. ಈ ಕಾರ್ಯವನ್ನು ನಾನು ಪ್ರೀತಿಯಿಂದ ಸ್ವಾಗತ ಮಾಡುವೆ ಎಂದು ಶಾಸಕ ಜಿ. ಟಿ. ದೇವೇಗೌಡರು ಹೇಳಿದರು.
ಪಕ್ಷ ಶುದ್ಧಿ ಮಾಡುವ ಕಾರ್ಯವನ್ನು ಮೈಸೂರಿನಿಂದಲೇ ಆರಂಭ ಮಾಡಲಿ ಎಂದು ಜೆಡಿಎಸ್ ವರಿಷ್ಠರಿಗೆ ಶಾಸಕ ದೇವೇಗೌಡರಿಗೆ ಸಲಹೆ ನೀಡಿದರು.
ಜೆಡಿಎಸ್ ನಲ್ಲಿ ಶಿಸ್ತಿನ ಕಾರ್ಯಕರ್ತ ನಾಗಿದ್ದೇನೆ. ಜೆಡಿಎಸ್‌ನಲ್ಲಿ ನಾನು ಒಂದೇ ಒಂದು ತಪ್ಪು ಮಾಡಿಲ್ಲ ಎಂದು ಹೇಳಿದರು.
ಇನ್ನೊಂದು ಪಕ್ಷ ಗೆಲ್ಲಿಸಲು ವೀಕ್ ಕ್ಯಾಂಡಿಟೇಟ್‌ಗೆ ಟಿಕೆಟ್ ಕೊಡಿಸಿಲ್ಲ. ಪಕ್ಷಕ್ಕೆ ದ್ರೋಹ ಮಾಡಿಲ್ಲ, ಪಕ್ಷ ವಿರೋಧಿ ಕೆಲಸ ಕೂಡ ಮಾಡಿಲ್ಲ. ಜೆಡಿಎಸ್ ವರಿಷ್ಠರು ಏನು ಬೇಕಾದರೂ ತೀರ್ಮಾನ ಕೈಗೊಳ್ಳಲಿ ಅದಕ್ಕೆ ನಾನು ಬದ್ಧನಾಗಿರುವೆ ಎಂದರು.
ಪಕ್ಷ ಶುದ್ದಿ ಮಾಡುವ ಕಾರ್ಯ ಮೈಸೂರಿನಿಂದಲೇ ಶುರುವಾಗಲಿ ಅಂತ ಹೇಳಿದ್ದಾರೆ. ಆಗಲಿ ಅವರ ನಿರ್ಧಾರಗಳನ್ನು ನಾನು ಸ್ವಾಗತ ಮಾಡ್ತಿನಿ. ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ . ಏಕೆಂದರೆ
ಸರ್ಕಾರ ಬಿದ್ದ ದಿನವೇ ನಾನು ಕುಮಾರಸ್ವಾಮಿ, ರೇವಣ್ಣನಿಗೆ ಕೈಮುಗಿದು ಬಂದಿದ್ದೇನೆ ದೇವೇಗೌಡರು ಹೇಳಿದರು.
ಹುಣಸೂರಿನಲ್ಲಿ ಹರೀಶ್‌ಗೌಡರನ್ನು ನಿಲ್ಲಿಸೋಲ್ಲ ಅಂತ ಕೈಮುಗಿದು ಹೇಳಿ ಬಂದಿದ್ದೇನೆ. ಅಂದಿನಿಂದ ಇಲ್ಲಿಯವರೆಗೆ ನಾನು ಕುಮಾರಸ್ವಾಮಿ ಜೊತೆ ಮಾತನಾಡಿಲ್ಲ. ಮಾತನಾಡಲು ಏನು ಉಳಿದಿಲ್ಲ. ಹಾಗಾಗಿ ನಾನು ಯಾವುದರ ಬಗ್ಗೆಯೂ ಮಾತನಾಡೋಲ್ಲ. ಯಾರ ವಿರುದ್ದವು ಪಕ್ಷದ ನಾಯಕರಿಗೆ ದೂರು ಕೊಡೋಲ್ಲ ಎಂದು ಜಿಟಿಡಿ ಸ್ಪಷ್ಟಪಡಿಸಿ ದರು.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ