December 23, 2024

Newsnap Kannada

The World at your finger tips!

priyank karge 1

ಕರ್ನಾಟಕದಲ್ಲಿ ಯುವತಿಯರಿಗೆ ನೌಕರಿ ಬೇಕು ಅಂದರೆ ಮಂಚ‌ ಹತ್ತಬೇಕು: ಪ್ರಿಯಾಂಕ್ ಖರ್ಗೆ

Spread the love

ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಬೇಕು ಅಂದ್ರೆ ಯುವತಿಯರು ಮಂಚ‌ ಹತ್ತಬೇಕು, ಯುವಕರು ಲಂಚ ಕೊಡಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಈ ಸರ್ಕಾರದಲ್ಲಿ ನೌಕರಿ ಕೊಡಬೇಕು ಅಂದ್ರೆ ದುಡ್ಡು ಕೊಡಲೇಬೇಕು. ಕರ್ನಾಟಕದಲ್ಲಿ ಯುವತಿಯರಿಗೆ ನೌಕರಿ ಬೇಕು ಅಂದ್ರೆ ಮಂಚ‌ ಹತ್ತಬೇಕು. ಯುವಕರಿಗೆ ನೌಕರಿ ಬೇಕು ಅಂದ್ರೆ ಲಂಚ ಕೊಡಬೇಕು. ರಾಜ್ಯದಲ್ಲಿ ಲಂಚ‌-ಮಂಚದ ಸರ್ಕಾರ ಕೆಲಸ ಮಾಡ್ತಾ ಇದೆ ಎಂದು ಆರೋಪಿಸಿದರು.

ಕಳೆದ‌ ಮೂರು ವರ್ಷದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಈ ಸರ್ಕಾರ ಶೂನ್ಯ ಸಾಧನೆ ಮಾಡಿದೆ. ಉದ್ಯೋಗ ಮೇಳ ಮಾಡಿದರೂ ಕೂಡ ಒಂದೂ ಸಾವಿರ ಜನರಿಗೆ ಉದ್ಯೋಗ ಕೊಡ್ತಿಲ್ಲ. ಪರೀಕ್ಷೆಯಲ್ಲಿ ಅಕ್ರಮ ಮಾಡುವವರಿಗೆ ಸರ್ಕಾರದ ಬಗ್ಗೆ ಎಷ್ಟು ಭಯ ಇದೆ ಅಂತಾ ಇದರಿಂದಲೇ ಗೋತ್ತಾಗುತ್ತೆ. ಇದೊಂದು ಅಸಮರ್ಥ ಸರ್ಕಾರ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. 40 ಪರ್ಸೆಂಟ್‌ ಕೊಟ್ಟರೆ ಎಲ್ಲ ಅಕ್ರಮ ನಡೆಸಬಹುದು ಅನ್ನೋದು ಸಾಬೀತಾಗಿದೆ ಎಂದರು.

40 ಪರ್ಸೆಂಟ್‌ ಕೊಟ್ಟರೆ ವಿಧಾನಸೌಧ ಕೂಡ ಮಾರಿ ಬಿಡ್ತಾರೆ. ನೇಮಕಾತಿಯಲ್ಲಿ ನಡೆದ ಹಗರಣಗಳ ಬಗ್ಗೆ ಒಂದು ಫಾಸ್ಟ್ ಟ್ರ್ಯಾಕ್ ಕೋರ್ಟ್ ಆಗಬೇಕು. ಆ ಮೂಲಕ ವೇಗವಾಗಿ ತನಿಖೆ ನಡೆಯಬೇಕು. ಸರ್ಕಾರಕ್ಕೆ ತಾಕತ್​ ಇದ್ರೆ ಸಿಟ್ಟಿಂಗ್ ಜಡ್ಜ್ ರಿಂದ ತನಿಖೆ ಮಾಡಿಸಲಿ. ಯುವಕರು ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ ಎಂದರು.

ಎಲ್ಲರಿಗೂ ಮುಖ್ಯಮಂತ್ರಿ ಆಗೋದಕ್ಕೆ ಅವಕಾಶ ಸಿಗೋದಿಲ್ಲ. ನಿಮಗೆ ಅವಕಾಶ ಸಿಕ್ಕಿದೆ ಕೆಲಸ ಮಾಡಿ ಅದನ್ನು ಬಿಟ್ಟು ಯುಪಿ ಮಾಡಲ್ ಮಾಡ್ತೇನೆ ಅಂತಾ ಹೇಳ್ತಿರಲ್ಲ ? ಮೂರನೆ ಸಿಎಂ ಬರ್ತಾರೆ , ಸಿಎಂ ಚೇಂಜ್ ಆಗ್ತಾರೆ ಅಂತಾ ಹೇಳಿದಾಗ ಎಲ್ಲಾ ಮಂತ್ರಿಗಳು ಬಂದು ಹೇಳಿಕೆ ಕೊಡ್ತಾರೆ. ಯುವಕರಿಗೆ ಅನ್ಯಾಯ ಆದಾಗ ಯಾವುದೇ ಒಬ್ಬ ಮಂತ್ರಿಯೂ ಮಾತಾಡೋದಿಲ್ಲ. ಬಾಯಿಗೆ ಜಿಪ್ ಹಾಕೊಂಡು ಪಿನ್ ಹೊಡಕೊಂಡು ಕೂತಿರ್ತಾರಲ್ಲ. ಈ ಸರ್ಕಾರ ಯುವಕರ ಭವಿಷ್ಯ ಮಾರಾಟ ಮಾಡಿ ಸರ್ಕಾರ ನಡೆಸ್ತಿದೆ. ಅಭ್ಯರ್ಥಿಗಳ ಪರವಾಗಿ ನಮ್ಮ ಕಾಂಗ್ರೆಸ್ ಹೋರಾಟ ಮಾಡೋದಕ್ಕೂ ಸಿದ್ಧವಿದೆ ಅಂತ ಹೇಳಿದರು.

Copyright © All rights reserved Newsnap | Newsever by AF themes.
error: Content is protected !!