December 25, 2024

Newsnap Kannada

The World at your finger tips!

harini father

3 ಕೋಟಿ ರು ಕಮೀಷನ್ ಆಸೆಗೆ ಬಲೆ ಬಿದ್ದು ಗಾಯಕಿ ಹರಿಣಿ ತಂದೆ ಆತ್ಮಹತ್ಯೆ ಮಾಡಿಕೊಂಡರೆ?

Spread the love

ತೆಲುಗು ಗಾಯಕಿ ಹರಿಣಿ ತಂದೆ ಎ.ಕೆ.ರಾವ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್  ಸಿಕ್ಕಿದೆ. ಗಾಯಕಿಯ ತಂದೆಯ ಸಾವಿನ ಸುತ್ತ 390 ಕೋಟಿ ಡೀಲ್​ ಹಣಕಾಸಿನ ವ್ಯವಹಾರವೇ ಕಾರಣ ಎನ್ನಲಾಗಿದೆ.

ಇತ್ತೀಚಿಗೆ ಕಾಣೆಯಾಗಿ ಬೆಂಗಳೂರಿನ ಯಲಹಂಕ ಬಳಿ ರೈಲು ಹಳಿಯ ಮೇಲೆ ಬಿದ್ದಿದ್ದ ಗಾಯಕಿ ತಂದೆಯ ನಿಗೂಢ ಸಾವಿನ ಸುತ್ತ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ಅವರ ಸಾವಿಗೆ ಮೂಲ ಕಾರಣವೇ ಹಣದ ವ್ಯವಹಾರ ಎನ್ನಲಾಗಿದೆ.

ರಿಯಲ್ ಎಸ್ಟೇಟ್  ಪ್ರಾಜೆಕ್ಟ್ ನಿರ್ಮಾಣಕ್ಕೆ ಸಂಬಂಧಿಸಿ ಬಿಲ್ಡರ್​ ಇಬ್ಬರಿಗೆ 390 ಕೋಟಿ ಲೋನ್ ಕೊಡಿಸುವುದಾಗಿ ಮುಂದಾಳತ್ವ ವಹಿಸಿದ್ದ ರಾವ್ ಉದ್ಯಮಿಗಳಾದ ಗಿರೀಶ್,ಮತ್ತು ಪನಿ ತಾರಮ್ ಎಂಬುವವರನ್ನ ‘ಏಸ್ ಕ್ಯಾಪಿಟಲ್ ವೆಂಚರ್ಸ್ ಫೈನಾನ್ಸ್’ ಕಂಪನಿಗೆ ಭೇಟಿ ಮಾಡಿಸಿದ್ದಾರೆ.

ಆ ಬಳಿಕ ಗಿರೀಶ್​ಗೆ  150 ಕೋಟಿ ಮತ್ತು ಪನಿ ತಾರಮ್​ಗೆ  240 ಕೋಟಿ ಲೋನ್​  ಕೊಡಿಸುವುದಾಗಿ ಮಾತುಕತೆ ನಡೆದಿದೆ. ಈ ವೇಳೆ ಲೋನ್​ ಹಣ ಕೈ ಸೇರುವ ಮೊದಲು 3 ಕೋಟಿ ಕಮಿಷನ್​ ಅನ್ನು ನಮಗೆ ನೀಡಬೇಕೆಂದು ಏಸ್ ಕ್ಯಾಪಿಟಲ್ ವೆಂಚರ್ಸ್ ಫೈನಾನ್ಸ್ ಮಾಲೀಕರು ಹೇಳಿದ್ದಾರೆ.

ಉದ್ಯಮಿಗಳು ರಾವ್​ ಅವರ ಮುಂದಾಳತ್ವದಲ್ಲಿ 3 ಕೋಟಿ ರೂಪಾಯಿಯನ್ನು ಕೊಡಲು ಒಪ್ಪಿದ್ದಾರೆ.

ಇಲ್ಲಿಗೆ ಅಸಲಿ ಆಟ ಶುರುವಾಗಿದ್ದು ಲೋನ್​ ಬರುವ ಮುನ್ನವೇ ಕಮಿಷನ್​ ನೀಡಿದ ಉದ್ಯಮಿಗಳು ಲೋನ್​ ಮಂಜೂರು ಆಗತ್ತೆ, ಆಗತ್ತೆ ಎಂದು ಕಾದು ಕುಳಿತು ಸಾಕಾಗಿದೆ. ಆಗ ಕಮೀಷನ್​ ಪಡೆದ ಫೈನಾನ್ಸ್​ ಮಾಲೀಕರು  ಮೋಸ ಮಾಡಿ ಎಸ್ಕೇಪ್​ ಆಗಿರುವ ಸಂಗತಿ ಬೆಳಕಿಗೆ ಬಂದಿದೆ.

ಫೈನಾನ್ಸ್​ ಕಂಪನಿಯ ಮಾಲೀಕರಾದ ಡೇನಿಯಲ್ ಆರ್ಮ್‌ಸ್ಟ್ರಾಂಗ್, ರಾಘವನ್, ಹಾಗೂ ವಿವೇಕಾನಂದ ಎಂಬುವವರಿಂದ ಮೋಸ ಹೋದ ಉದ್ಯಮಿಗಳು ಸದ್ದನಗುಂಟೆ ಪಾಳ್ಯ ಠಾಣೆಯಲ್ಲಿ  ಕೇಸ್​ ದಾಖಲಿಸಿದ್ದಾರೆ.

ವಂಚನೆಗೊಳಗಾದ ಉದ್ಯಮಿಗಳು ಫೈನಾನ್ಸ್​ ಮಾಲೀಕರ ಜೊತೆ ಎ. ಕೆ. ರಾವ್ ಹೆಸರನ್ನು ಕೂಡ ಎಫ್​ಐಆರ್​ ​ನಲ್ಲಿ ಉಲ್ಲೇಖಿಸಿದ್ದರಂತೆ. ಇದರಿಂದ ಗಾಬರಿಯಾದ ರಾವ್​ ತಾನೊಬ್ಬ ವೃತ್ತಿಯಲ್ಲಿ ಅಧ್ಯಾಪಕನಾಗಿದ್ದುಕೊಂಡು ಕಮೀಷನ್​ ಆಸೆಗಾಗಿ ಮೋಸ ಹೋದೆ ಎಂದು ಮನನೊಂದಿದ್ದರಂತೆ. ಆ ಬಳಿಕ  ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ನೇಹಿತರೊಬ್ಬರ ಬಳಿ  ಈ ಕುರಿತು ಮಾತನಾಡಿದ್ದರೆಂದು ಪ್ರಾಥಮಿಕ ತನಿಖೆಯ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.

ಇತ್ತ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿರುವ ಹಿನ್ನೆಲೆ ಸದ್ಯ ಕೊಲೆ ಆಯಾಮದಲ್ಲಿ ಕೂಡ ತನಿಖೆ ನಡೆಸುತ್ತಿರುವ ಪೊಲೀಸರು ಎಸ್ಕೇಪ್ ಆಗಿರುವ ಮೂವರು ಫೈನಾನ್ಸ್​ ಮಾಲೀಕರಿಗೆ ಹುಡುಕಾಟ ಆರಂಭಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!