ಸರ್ಕಾರ ಎಷ್ಟೇ ನಿಯಂತ್ರಣ ಮಾಡಬೇಕೆಂದುಕೊಂಡರೂ ಕೊರೋನಾ ದಿನೇ ದಿನೇ ಹೆಚ್ಚುತ್ತಲೇ ಇದೆ. ಜನರಲ್ಲಿ ಕೊರೋನಾ ಸೋಂಕಿನ ಬಗೆಗಿನ ಕಡೆಗಣನೆ ಬರುಬರುತ್ತ ಹೆಚ್ಚುತ್ತಿದೆ. ಬೀದಿಯಲ್ಲಿ ಹೋದರೂ ಸಹ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವದನ್ನು ಮಾಡುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಲು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮುಂದಾಗಿದ್ದಾರೆ.
ಈ ಕುರಿತು ಮಾಧ್ಯಮದವರೊಡನೆ ಮಾತನಾಡಿರುವ ಸಚಿವರು ‘ಪ್ರಸಕ್ತ ಕೋವಿಡ್ ಸಂದರ್ಭದಲ್ಲಿ ಒಂದು ಮದುವೆ ಸಮಾರಂಭಕ್ಕೆ ಕೇವಲ 50 ಜನರು ಮಾತ್ರ ಸೇರಬೇಕೆಂಬ ನಿಯಮವಿದೆ. ಆದರೆ ಯಾರೂ ಅದನ್ನು ಪಾಲನೆ ಮಾಡದಿರುವದರಿಂದ ಕೊರೋನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಮದುವೆ ಸಮಾರಂಭದಲ್ಲಿ 50 ಕ್ಕಿಂತ ಹೆಚ್ಚು ಜನರು ಸೇರಿದರೆ ಅಂತಹವರಿಗೆ ದಂಡ ವಿಧಿಸಲಾಗುವುದು’ ಎಂದು ಹೇಳಿದರು.
ಕೊರೋನಾ ಬಗೆಗೆ ಜನರಲ್ಲಿ ಅಸಡ್ಡೆ ಮೂಡುವ ಕುರಿತು ಮಾತನಾಡಿದ ಅವರು ‘ಇನ್ನು ಮುಂದೆ ಯಾರಾದರೂ ಮಾಸ್ಕ್ ಧರಿಸದೇ ಓಡಾಡಿದಲ್ಲಿ ಅವರಿಗೆ ದಂಡ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ. ನಗರ ಪ್ರದೇಶದ ಜನರಿಗೆ 1000ರೂ ದಂಡ ಹಾಕಿದರೆ, ಗ್ರಾಮೀಣ ಪ್ರದೇಶಗಳ ಜನರಿಗೆ 500ರೂ ಗಳ ದಂಡ ವಿಧಿಸಲಾಗುವುದು’ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು