December 24, 2024

Newsnap Kannada

The World at your finger tips!

prakash belavadi

ನನ್ನನ್ನು ಮೋದಿ ಚಮಚಾ ಅಂತಾರೆ: ಮೋದಿ ಇಲ್ಲ ಅಂದ್ರೆ ಸಿನಿಮಾ ರಿಲೀಸ್ ಆಗ್ತಾನೇ ಇರಲಿಲ್ಲ:ಪ್ರಕಾಶ್ ಬೆಳವಾಡಿ

Spread the love

ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿದ ನಂತರ ನನ್ನನ್ನು ನರೇಂದ್ರ ಮೋದಿ ಚಮಚಾ ಎನ್ನುತ್ತಿದ್ದಾರೆ. ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟವಾದವರು ಈ ರೀತಿ ಮಾತನಾಡುವುದು ಸಹಜ ಎಂದಿದ್ದಾರೆ ನಟ ಪ್ರಕಾಶ್ ಬೆಳವಾಡಿ.

ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇರದೇ ಇದ್ದರೆ ಸಿನಿಮಾ ಬಿಡುಗಡೆಯೇ ಆಗುತ್ತಿರಲಿಲ್ಲ ಎಂದರು ಪ್ರಕಾಶ್ ಬೆಳವಾಡಿ.

ಮೈಸೂರಿನಲ್ಲಿ ಗುರುವಾರ ‘ಮೈಸೂರು ಸಿನಿಮಾ ಸೊಸೈಟಿ’ ಏರ್ಪಡಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಆ ಚಿತ್ರದಲ್ಲಿ ನಟಿಸಿರುವ ನಟ ಪ್ರಕಾಶ್ ಬೆಳವಾಡಿ ಮಾತನಾಡಿದರು.

ಈ ಸಿನಿಮಾ ಅಪಪ್ರಚಾರಕ್ಕೆ ಬಳಕೆ ಆಗುತ್ತಿದೆ. ಜಾತಿರಾಜಕಾರಣಕ್ಕೆ ಕಾರಣವಾಗಿದೆ. ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿದೆ ಎಂದು ಮಾತನಾಡುತ್ತಿದ್ದಾರೆ. ಸಿನಿಮಾ ಇರುವುದೇ ಸತ್ಯ ಹೇಳುವುದಕ್ಕೆ. ಈ ಸಿನಿಮಾ ಸತ್ಯವನ್ನೇ ಹೇಳಿದೆ ಅಷ್ಟೆ ಎಂದರು.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಮತ್ತು ಆ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ತಮ್ಮನ್ನು ನರೇಂದ್ರ ಮೋದಿ ಅವರ ಚಮಚಾ ಎಂದು ಕರೆಯುತ್ತಿರುವ ವಿಷಯವನ್ನೂ ಅವರು ಹೇಳಿಕೊಂಡರು. ಕೆಲವು ವಿಷಯಗಳನ್ನು ಮೋದಿ ಅವರನ್ನು ಬೆಂಬಲಿಸಿದ್ದು ನಿಜ ಎಂದು ಪ್ರಕಾಶ್ ಬೆಳವಾಡಿ ಒಪ್ಪಿಕೊಂಡರು. ಯಾರು ಏನು ಬೇಕಾದರೂ ಅಂದುಕೊಳ್ಳಲಿ ನಾನು ಸತ್ಯದ ಪರ ಇರುವುದಾಗಿ ಅವರು ಸ್ಪಷ್ಟ ಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!