ಅಧ್ಯಕ್ಷೀಯ ಚುಣಾವಣೆಯಲ್ಲಿ ಸೋತರೆ ದೇಶ ತೊರೆಯುವೆ – ಟ್ರಂಪ್

Team Newsnap
1 Min Read

ಅಮೇರಿಕಾದ ಅಧ್ಯಕ್ಷೀಯ ಚುಣಾವಣೆಗೆ ಇನ್ನು ಕೇವಲ 15 ದಿನ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ‘ನಾನು ಚುಣಾವಣೆಯಲ್ಲಿ ಸೋತರೆ ದೇಶವನ್ನು ಬಿಟ್ಟು ಹೋಗುತ್ತೇನೆ’ ಎಂದು ಮ್ಯಾಕನ್ ಚುಣಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ.

ಮ್ಯಾಕನ್ ರ್ಯಾಲಿಯಲ್ಲಿ ಟ್ರಂಪ್ ‘ನಾನು ಚುಣಾವೆಯಲ್ಲಿ ವಿಜೇತನಾದರೆ ನೀವು ಮತ್ತೆ ನನ್ನ ನೋಡಬಹುದು. ಒಂದು ವೇಳೆ ಚುಣಾವಣೆಯಲ್ಲಿ ಪರಾಭವಗೊಂಡರೆ ಅಮೇರಿಕಾವನ್ನು ತೊರೆಯುತ್ತೇನೆ ಎಂದಿದ್ದಾರೆ.’

ಇದೇ ವೇಳೆ ಜೋ ಬಿಡೆನ್ ವಿರುದ್ಧ ಹರಿಹಾಯ್ದ ಟ್ರಂಪ್ ‘ಜೋ ಬಿಡನ್ ಅಮೆರಿಕದಲ್ಲಿ ಕಮ್ಯುನಿಸಮ್ ಮತ್ತು ಕ್ರಿಮಿನಲ್ ವಲಸಿಗರನ್ನು ತುಂಬಲಿದ್ದಾರೆ’ ಎಂದು ಆರೋಪ ಮಾಡಿದರು.

ಇದಕ್ಕೂ ಮೊದಲು ಜೋ ಬಿಡೆನ್ ‘ಟ್ರಂಪ್ ಸರ್ಕಾರ ಕೊರೋನಾ ನಿಯಂತ್ರಣ ಮಾಡುವಲ್ಲಿ‌ ವಿಫಲವಾಗಿದೆ‌. ದೆಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದು ಹೇಳಿದ್ದರು.

ಸದ್ಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ‌.

Share This Article
Leave a comment