Karnataka

ಸೋತರೆ ರಾಜಕೀಯ ನಿವೃತ್ತಿ?: ಆರ್ಕೆಷ್ಟ್ರಾದಲ್ಲಿ ಹಾಡಿ ಹೊಟ್ಟೆ ತುಂಬಿಸಿಕೊಳ್ಳುವೆ : ಶಾಸಕ ಅನ್ನದಾನಿ

ಮುಂದಿನ ರಾಜಕೀಯ ಜೀವನದಲ್ಲಿ ತಮಗೆ ಸೋಲುಂಟಾದರೆ ರಾಜಕೀಯ ನಿವೃತ್ತಿ ಹೊಂದಿ, ಸಾಂಸ್ಕೃತಿಕ ವ್ಯಕ್ತಿಯಾಗಿ ಬೆಳೆಯುತ್ತೇನೆ ಎಂದು ಹೇಳುವ ಮೂಲಕ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿ ಭಾನುವಾರ ರಾಜಕೀಯ ನಿವೃತ್ತಿಯ ಬಗ್ಗೆ ಪರೋಕ್ಷ ಸುಳಿವು ನೀಡಿದರು.

ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕ ಅನ್ನದಾನಿ ನಾನು ಯಾರನ್ನೂ ದ್ವೇಷಿಸುವುದಿಲ್ಲ, ತಾನೊಬ್ಬ ಸಾಂಸ್ಕೃತಿಕ ವ್ಯಕ್ತಿ. ರಾಜಕೀಯದಲ್ಲಿ ಹಣ ಮಾಡಬೇಕೆಂಬುವುದು ನನ್ನ ಮನಸ್ಸಿನಲ್ಲೂ ಇಲ್ಲ , ಹಾಡು ಹೇಳುವುದು ನಾಟಕ ಆಡುವುದನ್ನು ಕಲಿತಿದ್ದೇನೆ, ನೀವೇನಾದರೂ ಆಚೆಗೆ ಹಾಕಿದರೇ ಆರ್ಕೆಷ್ಟ್ರಾದಲ್ಲಿ ಹಾಡುಹೇಳಿಕೊಂಡು ಜೀವನ ಮಾಡುತ್ತೇನೆಂದು ಹೇಳಿದರು.

ತಾಲ್ಲೂಕಿನ ಮೂಗನಕೊಪ್ಪಲು ಬಳಿ ನಿರ್ಮಿಸುತ್ತಿರುವ ಕನಕ ಭವನವನ್ನು ತನ್ನ ಅಧಿಕಾರದಲ್ಲಿಯೇ ಪೂರ್ಣಗೊಳಿಸುವುದಾಗಿ ಶಾಸಕ ಡಾ.ಕೆ.ಅನ್ನದಾನಿ ಭರವಸೆ ನೀಡಿದರು.ಸೊಸೆ ಜಗಳಕ್ಕೆ ಬೇಸತ್ತು ಅತ್ತೆ , ಮಗ ಆತ್ಮಹತ್ಯೆ – ಬೆಂಗಳೂರಿನಲ್ಲಿ ದುರಂತ


ಸಮುದಾಯಗಳ ಮುಂದುವರೆಯುತ್ತಿರುವ ಅಭಿವೃದ್ದಿಯ ಸಂಕೇತವೇ ಸಮುದಾಯಗಳ ನಿರ್ಮಾಣವಾಗಿದೆ, ಹಿಂದೆ ಉಳಿದಿರುವ ಕುರುಬ ಸಮುದಾಯವನ್ನು ಮೇಲೆತ್ತುವ ಉದ್ದೇಶದಿಂದಲೇ ಹಿಂದೆ ಸಚಿವರಾಗಿದ್ದವರು ಮಾಡದ ಕೆಲಸವನ್ನು ತಾನು ಮಾಡಿದ್ದೇನೆಂದು ಹೇಳಿದರು.

ಬುದ್ದ ಬಸವ ಅಂಬೇಡ್ಕರ್, ಕನಕದಾಸಕರ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಸಿಕೊಳ್ಳಬೇಕಿದೆ, ೧೫ನೇ ಶತಮಾನದಲ್ಲಿ ತಮ್ಮ ಕೀರ್ತನೆಗಳ ಮೂಲಕ ಸಮಾನತೆಗಾಗಿ ಹೋರಾಟ ಮಾಡಿದ ಕನಕದಾಸರು ಅತಿ ಶ್ರೇಷ್ಟ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರೆಂದು ಸ್ಮರಿಸಿದರು.

ಸಿದ್ದರಾಮಯ್ಯ ಬಂದರೇ ವೋಟು ಬರುತ್ತದೆ ಎನ್ನುವ ಮನಸ್ಥಿತಿಯಲ್ಲಿ ಬೇರೆಯವರು ಇದ್ದಾರೆ, ಆದರೆ ನಾನು ಜನ ಸೇವೆ ಮೂಲಕ ಪ್ರಾಮಾಣಿಕವಾಗಿ ಮತದಾರರ ಋಣ ತೀರಿಸುತ್ತೇನೆ, ಹಿಂದೆ ಹಲವಾರು ಮಂದಿ ಶಾಸಕರಾಗಿ ಸಚಿವರಾಗಿದ್ದರೂ ಕೂಡ ಕನಕಭವನವನ್ನು ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ, ಆದರೇ ತಾನು ಕನಕಭವನವನ್ನು ನಿರ್ಮಿಸಲು ಮುಂದಾಗುವುದರ ಜೊತೆಗೆ ಕೆಲವೇ ತಿಂಗಳಲ್ಲಿ ಕನಕಭವನವನ್ನು ಉದ್ಘಾಟಿಸಲಾಗುವುದೆಂದು ಹೇಳಿದರು.

ಪುರಸಭೆ ಅಧ್ಯಕ್ಷೆ ರಾಧ ನಾಗರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಾತಿ
ಬೇದವನ್ನು ತೊಲಗಿಸಲು ಶ್ರಮಿಸಿದರು. ನಾಡಿನ ಮಹಾನ್ ನಾಯಕರಲ್ಲಿ ಒಬ್ಬರಾದ ಕನಕದಾಸರ
ಆದರ್ಶಗಳನ್ನು ಪ್ರಸ್ತುತದ ಯುವ ಸಮೂಹ ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕು
ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 30 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ಬೆಳ್ಳಿ ರಥದಲ್ಲಿ ಕನಕದಾಸರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.

ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ತಹಶಿಲ್ದಾರ್ ವಿಜಯಣ್ಣ, ತಾಲೂಕು ಪಂಚಾಯಿತಿ ಕಾಯ೯ನಿವ೯ಹಕ ಅಧಿಕಾರಿ ರಾಮಲಿಂಗಯ್ಯ ಪುರಸಭೆ ಸದಸ್ಯರಾದ ನಂದಕುಮಾರ್, ಸಿದ್ದರಾಜು. ನೂರುಲ್ಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿ ಕಂಸಾಗರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಚೇತನ್ ಕುಮಾರ್ ,ಮುಖಂಡರಾದ ನಾಗರತ್ನ.ನಿಂಗರಾಜು ರಾಮಚಂದ್ರ ಸೋಮಣ್ಣ ಮಹೇಶ್, ಬಿ ಇಒ ಚಿಕ್ಕಸ್ವಾಮಿ ಇದ್ದರು.

Team Newsnap
Leave a Comment
Share
Published by
Team Newsnap

Recent Posts

ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ

ರಾಯಚೂರು : ರಾಯಚೂರಿನ ತಾಪಮಾನ ಹೆಚ್ಚಳದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಜನರು ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದು ,… Read More

April 28, 2024

ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ

ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More

April 28, 2024

ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ

ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More

April 27, 2024

ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ

ತಮಿಳನಾಡಿಗೆ 275 ಕೋಟಿ ರೂ.'ನೆರೆ ಪರಿಹಾರ' ಘೋಷಣೆ ನವದೆಹಲಿ : ಕೇಂದ್ರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರಪರಿಹಾರ, ತಮಿಳಿನಾಡಿಗೆ… Read More

April 27, 2024

14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ

ಮಂಡ್ಯ : ನಿನ್ನೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನವಾಗಿದೆ ಕಳೆದ ಬಾರಿಗಿಂತ… Read More

April 27, 2024

ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ 9 ಗಂಟೆಗೆ ಶೇ. 7.70% ಮತದಾನ Join WhatsApp Group ವಿಧಾನಸಭಾ ಕ್ಷೇತ್ರವಾರು… Read More

April 26, 2024