ಮಂಡ್ಯ : ಜಿಲ್ಲೆಯಲ್ಲಿ ಸಾಮಾಜಿಕ ಮತ್ತುಆರ್ಥಿಕ ಭದ್ರತಾ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಮಂಡ್ಯ ಜಿಲ್ಲೆಯ ಫಲಾನುಭವಿಗಳು ಕಡ್ಡಾಯವಾಗಿ E-kyc ಮಾಡಿಸುವಂತೆ ಅಪರ ಜಿಲ್ಲಾಧಿಕಾರಿ ಡಾ:ಹೆಚ್ ಎಲ್ ನಾಗರಾಜು ಅವರು ತಿಳಿಸಿದರು.
ಜಿಲ್ಲೆಯಲ್ಲಿ OA, PHP, DYP, SSY, ಮನಸ್ವಿನಿ, ಮೈತ್ರಿ ಯೋಜನೆಯಲ್ಲಿ ಮಾಶಾಸನ ಮಂಜೂರಾಗಿರುವ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ ಡಿ.ಬಿ.ಟಿ ಮೂಲಕ ಅವರ ಬ್ಯಾಂಕ್ ಖಾತೆಗೆ ಮಾಶಾಸನ ಜಮೆ ಮಾಡಲಾಗುವುದು.
ಜಿಲ್ಲೆಯಲ್ಲಿ ಸುಮಾರು 12,822 ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ತಮಗೆ ಮಾಶಾಸನ ಪಾವತಿ ಮಾಡುವ ಬ್ಯಾಂಕ್ ಖಾತೆಗೆ ಲಿಂಕ್ (E-KYC) ಮಾಡಿರುವುದಿಲ್ಲ.
ಫಲಾನುಭವಿಗಳಿಗೆ ಇ- ಕೆವೈಸಿ ಬಗ್ಗೆ ಹೆಚ್ಚಿ ಮಾಹಿತಿ ಬೇಕಿದ್ದಲ್ಲಿ ಸ್ಥಳೀಯವಾಗಿ ರೆವೆನ್ಯೂ ಇನ್ಸ್ಪೆಕ್ಟರ್ ಅಥವಾ ವಿಲೇಜ್ ಅಕೌಂಟೆಂಟ್ ರವರನ್ನು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡು ಇ.ಕೆ.ವೈಸಿ ಮಾಡಿಸಿಕೊಳ್ಳುವುದು.
ಸೆ.30 ರೊಳಗೆ ಇ.ಕೆವೈಸಿ ಮಾಡಿಸದೇ ಮಾಶಾಸನ ಸ್ಥಗಿತವಾದಲ್ಲಿ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಹೊಣೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು