ನಟ ದುನಿಯಾ ವಿಜಯ್ ಬಂದು ಆಶೀರ್ವಾದ ಮಾಡದ ಹೊರತು ನಾನು ಮದುವೆ ಆಗುವುದಿಲ್ಲ ಎಂದು ದಾವಣಗೆರೆಯ ಯುವತಿಯೊಬ್ಬಳು ಪಟ್ಟು ಹಿಡಿದ ಪ್ರಸಂಗ ಜರುಗಿದೆ
ಸಾಮಾನ್ಯವಾಗಿ ಮದುವೆಗೆ ಸಂಬಂಧಿಕರು, ಅಣ್ಣಂದಿರು ಬಾರದಿದ್ದರೆ ಮದುವೆಯಾಗುವುದಿಲ್ಲ.ಬಂದು ಅಕ್ಷತೆ ಹಾಕಿದರೆ ಮಾತ್ರ ಮದುವೆ ಆಗುತ್ತೇನೆ ಎನ್ನುತ್ತಾರೆ
ಆದರೆ ದಾವಣಗೆರೆಯಲ್ಲಿ ಯುವತಿಯೊಬ್ಬಳು ತನ್ನ ಮೆಚ್ಚಿನ ನಟ ದುನಿಯಾ ವಿಜಯ್ ತನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ.
ದಾವಣಗೆರೆ ರಾಮನಗರ ಬಡಾವಣೆಯ ಶಿವಾನಂದ ಅವರ ಮಗಳು ಅನುಷಾ ಮದುವೆ ನವೆಂಬರ್ 29ಕ್ಕೆ ನಡೆಯಲಿದೆ.
ನಟ ದುನಿಯಾ ವಿಜಿ ಮದುವೆಗೆ ಬಂದು ಆಶೀರ್ವಾದ ಮಾಡದಿದ್ದರೆ ತಾಳಿಯೇ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಅಲ್ಲದೆ ಒಂಟಿ ಸಲಗ ಎಂದು ಹಚ್ಚೆ ಹಾಕಿಸಿಕೊಂಡಿರುವ ಅನುಷಾ, ಲಗ್ನ ಪತ್ರಿಕೆಯಲ್ಲಿ ಕೂಡ ದುನಿಯಾ ವಿಜಯ್ ಅವರ ಪೋಟೋ ಹಾಕಿಸಿಕೊಂಡಿದ್ದಾರೆ. ಮದುವೆಗೆ ದುನಿಯಾ ವಿಜಯ್ ಬಾರದಿದ್ದರೆ ಮದುವೆಯಾಗುವುದಿಲ್ಲ ಎಂದು ಅನುಷಾ ಪಟ್ಟು ಹಿಡಿದಿದ್ದಾಳೆ.
ಅನುಷಾ ಕುಟುಂಬಸ್ಥರು ಎಲ್ಲರೂ ದುನಿಯಾ ವಿಜಯ್ ಅಭಿಮಾನಿಗಳು. , ಕಳೆದ ಐದು ವರ್ಷದ ಹಿಂದೆ ಅನುಷಾ ತಂದೆ ಶಿವಾನಂದ್ ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದರು. ಅಲ್ಲದೆ ದುನಿಯಾ ವಿಜಯ್ ಬರುವವರೆಗೂ ಮನೆ ಓಪನಿಂಗ್ ಮಾಡುವುದಿಲ್ಲ ಎಂದು ಹಾಗೇಯೇ ಬಿಟ್ಟಿದ್ದರು. ಈ ವಿಚಾರ ತಿಳಿದು ವಿಜಯ್ ದಾವಣಗೆರೆಗೆ ಆಗಮಿಸಿ ಅಭಿಮಾನಿಯ ಗೃಹ ಪ್ರವೇಶ ಮಾಡಿದ್ದರು.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ