December 23, 2024

Newsnap Kannada

The World at your finger tips!

bhavani revanna

bhavani revvanna

ಭವಾನಿಗೆ ಟಿಕೆಟ್ ಇಲ್ಲ ಅಂದ್ರೆ ನನಗೂ ಬೇಡ; ಹೊಸ ವರಸೆ ತೆಗೆದ ರೇವಣ್ಣ

Spread the love

ಹಾಸನದ ಟಿಕೆಟ್ ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ . ಈಗ ಪತ್ನಿಯ ಪರವಾಗಿ ಹೆಚ್​ ಡಿ ರೇವಣ್ಣ ಬ್ಯಾಟ್​​ ಬೀಸಿದ್ದಾರೆ.

ನನ್ನ ಹೆಂಡ್ತಿಗೆ ಟಿಕೆಟ್ ಕೊಡದಿದ್ರೆ ನನಗೂ ಬೇಡ ಎಂದು ಅಚ್ಚರಿಯ ಹೇಳಿಕೆ ನೀಡಿ , ಜೆಡಿಎಸ್​ ಕಾರ್ಯಕರ್ತರನ್ನು ಅಚ್ಚರಿಗೆ ದೂಡಿದೆ

ಭವಾನಿ ರೇವಣ್ಣಗೆ ಹಾಸನದ ಟಿಕೆಟ್ ನಿರಾಕರಿಸಿದ ಹಿನ್ನೆಲೆ‌ ಹೆಚ್.ಡಿ.ರೇವಣ್ಣ ಹೊಸ ದಾಳ ಉರುಳಿಸಿದ್ದಾರೆ. ನನ್ನ ಹೆಂಡ್ತಿಗೆ ಟಿಕೆಟ್ ಕೊಡದಿದ್ರೆ ನನಗೂ ಬೇಡ ಎಂಬ ಸಂದೇಶವನ್ನು ಹಿರಿಯ ಸಹೋದರ ಬಾಲಕೃಷ್ಣೇಗೌಡರ ಮೂಲಕ ಕಳುಹಿಸಿದ್ದಾರೆ.

ಹಾಸನದಲ್ಲಿ ಪ್ರೀತಂಗೌಡ ವಿರುದ್ದ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಅನಾಥ ಪ್ರಜ್ಞೆ ಕಾಡುತ್ತೆ. ಹೇಗಾದರೂ ಸರಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದರು. ಹಿತೈಷಿಗಳು, ಆಪ್ತರ ಮಾತಿನಿಂದ ಉತ್ಸಾಹಗೊಂಡ ರೇವಣ್ಣ ಹಾಸನ ಕ್ಷೇತ್ರ ಉಳಿಸಿಕೊಳ್ಳದಿದ್ರೆ ಹೊಳೆನರಸೀಪುರದಿಂದ ನಾನು ಗೆದ್ದು ಏನ್ ಪ್ರಯೋಜನ. ಅಲ್ಲಿನ‌ ಟಿಕೆಟ್ ನನಗೂ ಬೇಡ ಎಂದು ಹೇಳಿದ್ದಾರೆ. ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಪ್ರಧಾನಿ

ಭವಾನಿ ರೇವಣ್ಣ ಪಕ್ಷೇತರವಾಗಿ ಚುನಾವಣೆ ನಿಲ್ಲಲು ಚಿಂತಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇವೆಲ್ಲದಕ್ಕೆ ಹೆಚ್​ ಡಿ ಕುಮಾರಸ್ವಾಮಿ ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲದ ಸಂಗತಿ

Copyright © All rights reserved Newsnap | Newsever by AF themes.
error: Content is protected !!