December 26, 2024

Newsnap Kannada

The World at your finger tips!

bengaluru,band.july

Idga Maidan- Chamarajpet Bandh in Bengaluru July 12 to condemn BBMP ಈದ್ಗಾ ಮೈದಾನ- BBMP ಹೇಳಿಕೆ ಖಂಡಿಸಿ ಜು.12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್‌

ಈದ್ಗಾ ಮೈದಾನ- BBMP ಹೇಳಿಕೆ ಖಂಡಿಸಿ ಜು.12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್‌

Spread the love

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಕ್ಫ್ ಬೋರ್ಡ್‌ಗೆ ಸೇರಿದೆ ಎಂಬ ಪಾಲಿಕೆಯ ಹೇಳಿಕೆ ಖಂಡಿಸಿ ಜುಲೈ 12ಕ್ಕೆ ಚಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ

ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಬಂದ್‌ ಕರೆ ನೀಡಿದ್ದು ಶಿರ್ಸಿ ಸರ್ಕಲ್ ನಿಂದ ಈದ್ಗಾ ಮೈದಾನದವರೆಗೆ ರ್‍ಯಾಲಿ ನಡೆಯಲಿದೆ.ಇದನ್ನು ಓದಿ –ಇಬ್ಬರು ಲಷ್ಕರ್ ಉಗ್ರರನ್ನು ಹಿಡಿದುಕೊಟ್ಟ ಜಮ್ಮು ಕಾಶ್ಮೀರದ ಗ್ರಾಮಸ್ಥರು-5 ಲಕ್ಷ ರು ಬಹುಮಾನ

ಚಾಮರಾಜಪೇಟೆ ಕ್ಷೇತ್ರದ ಜನ, ವಿವಿಧ ಸಂಘಟನೆಗಳ ಜೊತೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವರ್ತಕರು ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.

ಈದ್ಗಾ ಮೈದಾನ ಸರ್ಕಾರದ ಆಸ್ತಿ. ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿ ನಮಾಜ್‌ ಮಾಡಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.ಆದರೂ ಈದ್ಗಾ ಮೈದಾನ ವಕ್ಫ್‌ ಬೋರ್ಡ್‌ಗೆ ಸೇರಿದೆ ಎಂದು ಹೇಳಿ ಗೊಂದಲ ಮೂಡಿಸುತ್ತಿದೆ. ಶಾಸಕ ಜಮೀರ್‌ ಹೇಳಿದಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಾಗರಿಕರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!