ಚಾಮರಾಜ ನಗರ
ನ್ಯೂಸ್ ಸ್ನ್ಯಾಪ್
ಶ್ರೀಮಂತರ ಮಕ್ಕಳು ಓದುವ ದೊಡ್ಡ ದೊಡ್ಡ ಶಾಲೆಗಳಲ್ಲಿ ತಿನ್ನುವ ಐಸ್ ಕ್ರೀಮ್ ಗೆ ಮಾದಕ ವಸ್ತುಗಳನ್ನು ಲೇಪಿಸಿ ಕೊಡುತ್ತಿರುವ ಬಗ್ಗೆ ಅನುಮಾನ ಬಂದಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಸಚಿವರು ಡ್ರಗ್ಸ್ ದಂಧೆಗೆ ಶ್ರೀಮಂತರ ಮಕ್ಕಳನ್ನು ಮಾತ್ರ ಗುರಿ ಇಡಲಾಗಿದೆ,ಈ ಜಾಲಕ್ಕೆ ಸೆಳೆಯಲು ಐಸ್ ಕ್ರೀಂ ಗೆ ಮಾದಕ ವಸ್ತುಗಳನ್ನು ಲೇಪಿಸಲಾಗುತ್ತದೆ ಎಂದರು,
ಯುವಜನತೆಯನ್ನು ಹಾಳುಮಾಡುತ್ತಿರುವ ದುಷ್ಟರನ್ನು ಹಿಡಿದು ಜೈಲಿಗೆ ಕಳಿಸುತ್ತೇವೆ.ಡ್ರಗ್ಸ್ ವಿಚಾರವಾಗಿ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ.ಇದರಲ್ಲಿ ರಾಜಿ ಪ್ರಶ್ನೆ ಇಲ್ಲ .ಮಾದಕ ವಸ್ತುಗಳು ಸಮಾಜ ಹಾಗೂ ಯುವಜನಾಂಗವನ್ನು ದುರ್ಬಲ ಮಾಡುತ್ತದೆ ಇದನ್ನು ಬುಡಸಮೇತ ಕಿತ್ತುಹಾಕುತ್ತೇವೆ ಎಂದರು.
ಮೂರು ವರ್ಷಗಳ ಹಿಂದೆಯೇ ಡ್ರಗ್ಸ್ ಬಗ್ಗೆ ಬಿಜೆಪಿ ಧ್ವನಿ ಎತ್ತಿದೆ.ಈ ಪ್ರಕರಣವನ್ನು ರಾಜ್ಯ ಸರ್ಕಾರ ತಾರ್ಕಿಕ ಅಂತ್ಯಕ್ಕೆ ತಲುಪಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
*ಚಿಕ್ಕ್ಕಕಂದಿನ ವಿದ್ಯೆ*
ಮಕ್ಕಳಿಗೆ ಬಾಲ್ಯದೊಳು ಅಕ್ಕರವಿದ್ಯೆಯನು ಕಲಿಪದಿರ್ದೊಡೆ ಕೊಂದಂ.ಲಕ್ಕ ಧನಮಿರಲು ಕೆಡುಗು ಚೂಡಾರತ್ನ
ತಂದೆ ತಾಯಿ ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ,ನಡವಳಿಕೆ ,ಶ್ರಮದ ದುಡಿಮೆ ,ಹಣದ ಮಹಿಮೆಯ ಅರಿವು, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕೆಂಬುದರ ಪ್ರಾಥಮಿಕ ಅರಿವು, ನಮ್ಮ ಸಂಸ್ಕೃತಿಯ ಬಗೆಗೆ ಅರಿವು ಅಭಿಮಾನಾದಿಗಳನ್ನು ಒಡಮೂಡಿಸಿದರೆ ಅದು ಜೀವನಸೌಧದ ಭದ್ರ ಫೌಂಡೇಷನ್.ಇಂದಿನ ಯುವಪೀಳಿಗೆಯಲ್ಲಿ ಮಹಾನಗರಗಳಲ್ಲಿ ಬೆಳೆದ ಸಿನೀಮೀಯ ಬದುಕಿನ ಥಳುಕುಬಳುಕೊನೊಂದಿಗೆ ಹೆಜ್ಜೆಗಳನ್ನಿಡುತ್ತಿರುವ ಸಿರಿವಂತರ ಹಾಗೂ ಸೆಲ್ಯುಲಾಯಿಡ್ ಜಗತ್ತಿನ ಮಕ್ಕಳೇ ಹೆಚ್ಚಾಗಿ ಇಂತಹ ನಶೆಯಛಾಯೆಯಲ್ಲಿ ಬಡಿದಾಡುತ್ತಿರುವುದು ಕಂಡಾಗ ವಿಷಾದವೆನ್ನಿಸುತ್ತದೆ.
ತಕ್ಕುದಾದ ನಿಜವಾದ ಶಿಕ್ಷಣವನ್ನು ನೀಡುವಲ್ಲಿ ತಂದೆತಾಯಿ,ಸಮಾಜ ಹಾಗೂ ಶಿಕ್ಷಣ ಇಲಾಖೆಯು ಎಡವುತ್ತಿದೆಯೇ ಎಂಬ ಗುಮಾನಿಗೆ ಎಡೆನೀಡುತ್ತಿದೆ.
ದೃಶ್ಯಮಾಧ್ಯಮಗಳು ಎರ್ರಾಬಿರ್ರಿ ಹೇಳುವವರೇ ಇಲ್ಲವೇ ಎಂಬಂತೆ ಯುವಕಿಶೋರರನ್ನು ಒತ್ತಡದಕುಲುಮೆಗೆ ತಳ್ಳುವುದರಲ್ಲೇ ತಮ್ಮ ಬೇಳೆಬೇಯಿಸಿಕೊಳ್ಳುತ್ತಾ ಆಟವಾಡುತ್ತಿವೆಯೇ ಎಂಬುದು ನಾವೆಲ್ಲ ಚಿಂತಿಸಬೇಕಾದ ಕಟುಸತ್ಯ.
ಕೊರೊನಾ ವೈರಸ್ ಜತೆ ಬಡಿದಾಡುವುದರ ಜೊತೆಗೆ ನಮ್ಮ ಮಕ್ಕಳ ಹಿತಚಿಂತನೆಯು ಹೆಚ್ಚು ಆದ್ಯತೆಯ ವಿಷಯವಾಗಿದೆ ಎಂಬುದನ್ನು ಮರೆಯದಿರೋಣ
ಯೋಚಿಸೋಣ
ಕೊ🙏🕉️🚩ವೆಂ🐄
ಅನಂತನಲ್ಲಿ ಲೀನನಾದ ಅನಂತಕುಮಾರ ಸ್ವಾಮೀಜಿ
ಎತ್ತಣಿಂದೆತ್ತ ಸಂಬಂಧ. ದೂರದ ವಾರಣಾಸಿ ಎಲ್ಲಿ. ಮಂಡ್ಯವೆಲ್ಲಿ! 1969ರಲ್ಲಿ ಕಾಶಿಯಿಂದ ಮಂಡ್ಯಕ್ಕೆ ಪಾದಾರ್ಪಣೆ ಮಾಡಿದ *ದಾದಾ* ಎಂದೇ ಜನರಿಗೆ ಅಚ್ಚುಮೆಚ್ಚಾದ ಶ್ರೀ ಅನಂತಕುಮಾರನು ಪುಟ್ಟ ಗುಡಿಸಲೊಂದರಲ್ಲಿ ಅಭಿನವಭಾರತಿ ವಿದ್ಯಾಕೇಂದ್ರವನ್ನು ತೆರೆಯುವ ಮೂಲಕ ಮಂಡ್ಯಕ್ಕೊಂದು ಶಿಕ್ಷಣಕಲ್ಪವೃಕ್ಷವಾಗಿ ಬೆಳೆದರು. ಶ್ರೀ ವೆಂಕಟೇಶ್ವರ ಧ್ಯಾನಕೇಂದ್ರವನ್ನು ಆರಂಭಿಸಿ ಮಂಡ್ಯದಲ್ಲಿ ವೆಂಕಟೇಶ್ವರನ ಆವಾಸಭೂಮಿಯನ್ನಾಗಿ ಬೆಳೆಸಿದರು.ಆಧ್ಯಾತ್ಮಿಕ ಸಾಧಕರನ್ನು ಹುಟ್ಟುಹಾಕಿದರು.ಧ್ಯಾನ ಪ್ರಾಣಾಯಾಮ,ಭಜನೆ ಪ್ರವಚನಗಳಿಂದ ಮಂಡ್ಯದ ಜನತೆಯಲ್ಕಿ ಆಧ್ಯಾತ್ಮಿಕ ಪರಿಸರದ ಸುಗಂಧವನ್ನು ಪಸರಿಸಲು ನಿರ್ಮಮ ಕೈಂಕರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಅನಂತಕುಮಾರ ಸ್ವಾಮೀಜಿಯವರು ಐಹಿಕವನ್ನು ಪೂರೈಸಿ ಗೋವಿಂದನಲ್ಲಿ ಸಾಯುಜ್ಯವನ್ನು ಹೊಂದಿದರು.ಅವರ ಆಧ್ಯತ್ಮಿಕ ಪ್ರಕಾಶ ನಾಡಿನಜನತೆಯನ್ನು ಬೆಳಗುತ್ತಿರಲಿ
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ