ಈ ಸುದ್ದಿ ನಂಬಬೇಕಾ, ಬಿಡಬೇಕಾ ನಿಮಗೆ ಬಿಟ್ಟದ್ದು. ಆದರೆ ಸುದ್ದಿಯಲ್ಲಿ ಸತ್ಯವಿದೆ .
ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಸಿ. ಎಂ. ಇಬ್ರಾಹಿಂ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿ ಕುತೂಹಲ ಮೂಡಿಸಿದ್ದಾರೆ.
ರಾಜಕಾರಣದಲ್ಲಿ ಯಾರೂ ಶಾಶ್ವತ ಶತೃಗಳಿಲ್ಲ, ಮಿತ್ರರೂ ಇಲ್ಕ ಎನ್ವುವುದಕ್ಕೆ ಇಲ್ಲೊಂದು ತಾಜ ಉದಾಹರಣೆ ಇದು.
ಬೆಂಗಳೂರಿನ ಬೆನ್ಜನ್ ಟೌನ್ ನಲ್ಲಿರುವ ಇಬ್ರಾಹಿಂ ನಿವಾಸಕ್ಕೆ ಆಗಮಿಸಿದ ಕುಮಾರಸ್ವಾಮಿ ಕೆಲವು ಮಾತುಕತೆ ನಡೆಸಿದರು.
ಮಾಜಿ ಸಿ ಎಂ ಎಚ್ ಡಿಕೆ, ಇಬ್ರಾಹಿಂ ಮನೆ ಹೋಗಿ ಚರ್ಚೆ ಮಾಡಿ ಮುಂದಿನ ರಾಜಕೀಯ ದಾರಿಗಳ ಹುಡುಕಾಟ ನಡೆಸಿರುವ ಇಬ್ರಾಹಿಂ ಗೆ ಜೆಡಿಎಸ್ ಗೆ ಬರುವಂತೆ ಆಫರ್ ಕೊಟ್ಟಿದ್ದಾರೆ.
ಈ ನಡುವೆ ನನ್ನ ಮತ್ತು ಸಿದ್ದರಾಮಯ್ಯ ನವರ ನಡುವೆ ಬಾಂಧವ್ಯ ಚೆನ್ನಾಗಿಲ್ಲ. ಈಗ ದಾರಿಗಳು ಬೇರೆ, ಬೇರೆಯಾಗಿವೆ . ನನ್ನ ದಾರಿ ನನಗೆ. ಮುಂದಿನ ದಿನಗಳಲ್ಲಿ ಯಾವ ರೀತಿ ದಾರಿಗಳು ಬದಲಾವಣೆ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದಷ್ಟೇ ಇಬ್ರಾಹಿಂ ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರೊಂದಿಗೆ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಇಬ್ರಾಹಿಂ ಹೆಚ್ಚು ಕಡಮೆ ಕಾಂಗ್ರೆಸ್ ಗೆ ಎಳ್ಳು ನೀರು ಬಿಟ್ಟಂತೆ ಕಾಣುತ್ತದೆ. ಇಂದಿನ ರಾಜಕೀಯ ಬೆಳವಣಿಗೆ ಗಮನಿಸಿದರೆ ಇಬ್ರಾಹಿಂ ಕಾಂಗ್ರೆಸ್ ನಿಂದ ಗಂಟು ಮೂಟೆ ಕಟ್ಟಿಕೊಂಡು ಬೇರೆ ಪಕ್ಷಕ್ಕೆ ಸೇರಲು ಸಿದ್ದರಾಗಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು