December 24, 2024

Newsnap Kannada

The World at your finger tips!

IAS tina

2ನೇ ಮದುವೆಗೆ ರೆಡಿಯಾದ ಐಎಎಸ್ ಟಾಪರ್ ಟೀನಾ ದಾಬಿ: ಪ್ರದೀಪ್ ಗೂ 2 ನೇ ಮದುವೆ

Spread the love

ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಟೀನಾ ದಾಬಿ, ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಜೊತೆಗೆ 2ನೇ ಮದುವೆಯಾಗುತ್ತಿದ್ದಾರೆ.

ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಮ್‍ನಲ್ಲಿ ಟೀನಾ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಭಾವಿ ಪತಿ ಪ್ರದೀಪ್ ಗಾವಂಡೆ ಅವರಿಗೂ ಇದು ಎರಡನೇ ಮದುವೆ. ಐಎಎಸ್ ಆಗುವ ಮೊದಲು ಅವರು ವೈದ್ಯರಾಗಿದ್ದರು ಎನ್ನಲಾಗಿದೆ.

2015 ರಲ್ಲಿ, ಟೀನಾ ದಾಬಿ ದಲಿತ ಸಮುದಾಯದಿಂದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ವ್ಯಕ್ತಿಯಾದರು.

ಟೀನಾ ದಾಬಿ ಮತ್ತು ಅಥರ್ ಖಾನ್ ಇಬ್ಬರೂ ತರಬೇತಿ ಸಮಯದಲ್ಲಿ ಪರಸ್ಪರ ಪ್ರೀತಿಸಿ 2018 ರಲ್ಲಿ ಅವರಿಬ್ಬರ ವಿವಾಹವು ಬಹಳಷ್ಟು ಸುದ್ದಿ ಮಾಡಿತ್ತು.

ಟೀನಾ 2020ರ ನವೆಂಬರ್ ನಲ್ಲಿ ಮೊದಲ ಪತಿ ಅಮೀರ್ ಉಲ್‍ಶಫಿ ಖಾನ್ ಅವರಿಂದ ವಿಚ್ಚೇದನ ಪಡೆದಿದ್ದಾರೆ. ಮದುವೆಯಾಗಿ ಎರಡೇ ವರ್ಷಕ್ಕೆ ಈ ದಂಪತಿ ಬೇರೆಯಾಗಿದ್ದರು.

ಅಥರ್ ಖಾನ್ ಮೊದಲು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ವಿಚ್ಛೇದನದ ನಂತರ ಅವರು ಜಮ್ಮು ಮತ್ತು ಕಾಶ್ಮೀರ ಕೇಡರ್‍ನೊಂದಿಗೆ ತಮ್ಮ ರಾಜ್ಯಕ್ಕೆ ಹೋದರು.

ಟೀನಾ ದಾಬಿ ಮೂಲತಃ ದೆಹಲಿಯವರು. ಕಳೆದ ವರ್ಷ ಅವರ ಸಹೋದರಿ ರಿಯಾ ದಾಬಿ ಕೂಡ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದರು. ಇದೀಗ ಟೀನಾ ಮತ್ತೆ 2ನೇ ಮದುವೆಗೆ ಸಿದ್ಧರಾಗಿದ್ದು, ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!