January 29, 2026

Newsnap Kannada

The World at your finger tips!

ias

ಐಎಎಸ್‌ ಟಾಪರ್‌ ದಂಪತಿ ಟೀನಾ ದಬಿ- ಅಥರ್‌ ವಿಚ್ಛೇದನಕ್ಕೆ ಅರ್ಜಿ

Spread the love

2015ನೇ ಸಾಲಿನ ಲೋಕಸೇವಾ ಆಯೋಗದ ಪರೀಕ್ಷೆಯ ಟಾಪರ್ ಟೀನಾ ದಬಿ ಹಾಗೂ ಅಥಾರ್ ಆಮೀರ್-ಉಲ್-ಶಫೀ ಖಾನ್ ಮದುವೆ ಸಂಸಾರ ಸಂಭಮ ಕೆಲ ವರ್ಷಗಳಲ್ಲೇ ಮುಕ್ತಾಯ ಕಂಡಿದೆ.

ಯುಪಿಎಸ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದಿದ್ದ ದಬಿ ಮೇಲೆ ಪ್ರೀತಿ ಬಂದಿದ್ದ ಖಾನ್ ಅದೇ ಪರೀಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿದ್ದವರು. ಈಗ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಕ್ಕೆ ಅರ್ಜಿ ಹಾಕಿದ್ದಾರೆ.

ಪೋಷಕರ ಒಪ್ಪಿಗೆ ಇತ್ತು

ಎರಡೂ ಕಡೆಯ ಪೋಷಕರು ಈ ಸಂಬಂಧವನ್ನು ಒಪ್ಪಿದ್ದಾರೆ. ‘ನಾನು ಸ್ವತಂತ್ರ ಆಲೋಚನೆ ಇರುವ ಮಹಿಳೆಯಾಗಿ ಕೆಲವನ್ನು ಆರಿಸಿಕೊಳ್ಳಲು ಸ್ವತಂತ್ರಳು. ನನ್ನ ಆಯ್ಕೆ ಬಗ್ಗೆ ಸಂತೋಷ ಇದೆ. ಅದೇ ಥರ ಅಮೀರ್ ಗೂ ಖುಷಿ ಇದೆ. ನಮ್ಮ ಫೋಷಕರು ಸಂತೋಷವಾಗಿದ್ದಾರೆ. ಸಣ್ಣ ಸಮುದಾಯದಿಂದ ಬಂದಂಥ ನಮ್ಮಂಥವರು ಬೇರೆ ಧರ್ಮದ ಹುಡುಗನ ಜೊತೆ ಡೇಟಿಂಗ್ ಮಾಡುವಾಗ ನಕಾರಾತ್ಮಕ ಮಾತುಗಳನ್ನಾಡುವುದು ಸಹಜ ಎಂದು ಟೀನಾ ದಬಿ ಡೇಟಿಂಗ್, ಪ್ರೀತಿ ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಶ್ಮೀರದ ಒಂದು ಸಣ್ಣ ಹಳ್ಳಿಯವರಾದ ಅಥಾರ್ ಆಮೀರ್-ಉಲ್-ಶಫೀ ಖಾನ್ ದೆಹಲಿಯ ದಲಿತ ಕುಟುಂಬದ ಹೆಣ್ಣುಮಗಳು ದಬಿಯನ್ನು ಮೆಚ್ಚಿ ಪ್ರೀತಿಸಿದ್ದರು.

ಲವ್ ಜಿಹಾದ್?

2016ರಲ್ಲಿ DOPT ಕಚೇರಿಯ ಸನ್ಮಾನ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೇಮ ನಿವೇದಿಸಿಕೊಂಡಿದ್ದರು. ಇಬ್ಬರ ಮದುವೆಯನ್ನು ಲವ್ ಜಿಹಾದ್ ಎಂದು ಧಾರ್ಮಿಕ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.

ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟೀನಾ ಅವರು ತಮ್ಮ ಹೆಸರಿನ ಜೊತೆಗಿದ್ದ ಖಾನ್ ಸರ್ ನೇಮ್ ತೆಗೆದು ಹಾಕಿದ್ದು ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಟೀನಾರನ್ನು ಅಥಾರ್ ಅನ್ ಫಾಲೋ ಮಾಡಿದ್ದರು.

error: Content is protected !!