December 20, 2024

Newsnap Kannada

The World at your finger tips!

0eb9300b 67a6 49c9 8b45 def016a028c4

ನನ್ನ ಗೆಲುವು ನಿಶ್ಚಿತ -ಕುಸುಮಾ ಆತ್ಮವಿಶ್ವಾಸ

Spread the love

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಮುಗಿದಿದೆ. ಈಗ ಎಲ್ಲರ ಗಮನ ಫಲಿತಾಂಶದತ್ತ ನೆಟ್ಟಿದೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದರು.‌

ಆರ್.ಆರ್ ನಗರ ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಸುಮಾ ನನಗೆ ಗೆಲ್ಲುವ ಆತ್ಮವಿಶ್ವಾಸ‌ ಇದೆ. ಶೇಕಡವಾರು ಮತದಾನ ಕಡಿಮೆ ಆಯಿತು ಎಂಬ ಕಾರಣಕ್ಕೆ ಈ ವಿಶ್ವಾಸ ವ್ಯಕ್ತಪಡಿಸುತ್ತಿಲ್ಲ. ಜನರು ನನಗೆ ತೋರಿಸಿದ ಪ್ರೀತಿಯಿಂದ ಈ ವಿಶ್ವಾಸ ಮೂಡಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ನಿಷ್ಪಕ್ಷಪಾತ ಚುನಾವಣೆ ನಡೆದಿದೆ. ನಾವು ಇದನ್ನೇ ಬಯಸಿದ್ದೆವು. ಎಲ್ಲಾ ಪಕ್ಷದ ಮತದಾರರು ನನಗೆ ಬೆಂಬಲ ನೀಡಿದ್ದಾರೆ. ನನ್ನ ಗೆಲುವು ನಿಶ್ಚಿತ, ಚುನಾವಣೆ ಫಲಿತಾಂಶದ ಬಳಿಕ ಉಳಿದ ಎಲ್ಲ ಮಾಹಿತಿಯನ್ನು ಜನರಿಗೆ ಹೇಳುತ್ತೇನೆ ಎಂದರು.

ಸಿದ್ದರಾಮಯ್ಯ ಸಾಹೇಬ್ರು, ಶಿವಕುಮಾರ್ ಅಣ್ಣ ಮಾರ್ಗದರ್ಶನ ಚೆನ್ನಾಗಿತ್ತು. ಚುನಾವಣೆಗೆ ಮಾತ್ರ ನಾನು ಸೀಮಿತವಾಗಲ್ಲ. ಚುನಾವಣೆ ನಂತರವೂ ನಾನು ಕ್ಷೇತ್ರದ ಜನರ ಜೊತೆ ಇರುತ್ತೇನೆ. ಶೇಕಡಾವಾರು ಕಡಿಮೆ ವಿಚಾರವಾಗಿ, ಬುದ್ಧಿವಂತ ಮತದಾರರು ಪ್ರಸಕ್ತ ಬೆಳವಣಿಗೆಯಿಂದ ಬರದೇ ಇರಬಹುದು. ಕೋವಿಡ್ ಕಾರಣದಿಂದಲೂ ಮತಗಟ್ಟೆ ಬಳಿ ಮತದಾರರು ಬಂದಿಲ್ಲ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!