ದೇವರಾಣೆಗೂ ಹೇಳುವೆ ನಾನು ತಾಯಿ ಆಗಲಾರೆ.
ನಟಿ ಪಾರುಲ್ ಯಾದವ್ ತುಂಬಾ ನೋವಿನಿಂದ ಆಣೆ ಮಾಡಿ ಹೇಳಿದ ರೀತಿ ಇದು.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಟಿ ಪಾರುಲ್ ಯಾದವ್ ತಾನು ತಾಯಿಯಾಗುವುದಿಲ್ಲ ಎಂದು ಶಪಥಗೈದಿದ್ದಾರೆ.
‘ಹೆಣ್ತನದ ಸಾರವೇ ತಾಯ್ತನ. ಆದರೆ ನಾನಿಂದು ಅಮ್ಮನಾಗಲು ಬಯಸುತ್ತಿಲ್ಲ. ಒಂದು ಹುಡುಗಿಯಾಗಿ ಹೀಗೆ ಹೇಳುವುದು ತುಂಬಾ ಕಷ್ಟ. ಆದರೆ ನಾನು ಆಣೆ ಮಾಡಿ ಹೇಳುತ್ತಿದ್ದೇನೆ. ನಾನು ನಿಜಕ್ಕೂ ತಾಯ್ತನವನ್ನು ತ್ಯಜಿಸುತ್ತಿದ್ದೇನೆ. ನನ್ನ ಮಗು ಹೆಣ್ಣಾದರೆ ಏನು ಗತಿ? ಈ ದೇಶ ಮಹಿಳೆಯರಿಗೆ ಕ್ರೂರಿಯಾಗಿದೆ. ಹತ್ರಾಸ್‌ನಲ್ಲಿ ನಡೆದ ಭಯಂಕರ ಘಟನೆ ಇತ್ತೀಚೆಗಿನ ಉದಾಹರಣೆ’ ಎಂದು ಪಾರುಲ್ ಯಾದವ್ ಟ್ವೀಟ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ನಟಿಯರ ಬೆಂಬಲಕ್ಕೆ ನಿಂತಿದ್ದ ಪಾರುಲ್, ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ಈ ಮೂವರು ಜನ ಮಹಿಳೆಯರ ಮೇಲೆ ಕೇಂದ್ರೀಕರಿಸುತ್ತಿರುವುದರಲ್ಲಿ ಹೆಚ್ಚು ಅರ್ಥವಿದೆ ಎಂದು ನನಗನಿಸುತ್ತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ