ನಾನು ಕೊನೆಯವರೆಗೂ ಹಾಗೂ ಎಂದೆಂದಿಗೂ ಆರ್ಸಿಬಿ ಆಟಗಾರ. ಬೇರೆ ತಂಡದ ಪರ ಆಡುವುದಿಲ್ಲ ಎಂದು ABD ವಿಲಿಯರ್ಸ್ ಹೇಳಿದ್ದಾರೆ
ಸುದ್ದಿಗಾರರ ಜೊತೆ ಮಾತನಾಡಿದ ಎಬಿಡಿ, ನಾನು ಆರ್ಸಿಬಿ ಆಟಗಾರನಾಗಿಯೇ ಉಳಿದಿದ್ದೇನೆ. ನನ್ನ ಈ ನಿರ್ಧಾರ ಬಹಳ ಬೇಸರ ತರಿಸಿದೆ. ಕೆಲವು ಅನಿವಾರ್ಯ ಕಾರಣಾಂತರಗಳಿಂದ ಈ ನಿಧಾ೯ರ ತೆಗೆದುಕೊಂಡಿದ್ದೇನೆ. ನನಗೂ ಭಾರತದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ನನಗೂ ಆರ್ಸಿಬಿಗೂ ಅವಿನಾಭಾವ ಸಂಬಂಧ. ಹಾಗಾಗಿ ಮುಂದೆಯೂ ಆರ್ಸಿಬಿಯೊಂದಿಗೆ ಇರುತ್ತೇನೆ ಎಂದು ಹೇಳಿದರು.
ನಾನು ಆರ್ಸಿಬಿ ಸೇರಿದ ಬಳಿಕ ಅರ್ಧ ಭಾರತೀಯನಾಗಿದ್ದೇನೆ. ಭಾರತವು ನನ್ನ ಹೃದಯದಲ್ಲಿ ವಿಶೇಷವಾಗಿ ನೆಲೆಸಿದೆ ಎಂದರು
ಇದೊಂದು ಅದ್ಭುತ ಪ್ರಯಾಣ. ನನಗೀಗ 37ನೇ ವರ್ಷ, ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ನನ್ನ ಮೇಲೆ ನೀವು ತೋರಿಸಿದ ಪ್ರೀತಿ ಚಿರಋಣಿ ಎಂದು ಭಾವುಕರಾದರು ಎಬಿಡಿ.
ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್, ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವುದನ್ನು ಸ್ಮರಿಸಬಹುದು
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ