January 30, 2026

Newsnap Kannada

The World at your finger tips!

abd

ನಾನು ಎಂದಿಗೂ ಆರ್​​ಸಿಬಿ ಆಟಗಾರ – ABD ಭಾವುಕ ನುಡಿ

Spread the love

ನಾನು ಕೊನೆಯವರೆಗೂ ಹಾಗೂ ಎಂದೆಂದಿಗೂ ಆರ್‌ಸಿಬಿ ಆಟಗಾರ. ಬೇರೆ ತಂಡದ ಪರ ಆಡುವುದಿಲ್ಲ ಎಂದು ABD ವಿಲಿಯರ್ಸ್ ಹೇಳಿದ್ದಾರೆ

abd retires ns

ಸುದ್ದಿಗಾರರ ಜೊತೆ ಮಾತನಾಡಿದ ಎಬಿಡಿ, ನಾನು ಆರ್‌ಸಿಬಿ ಆಟಗಾರನಾಗಿಯೇ ಉಳಿದಿದ್ದೇನೆ. ನನ್ನ ಈ ನಿರ್ಧಾರ ಬಹಳ ಬೇಸರ ತರಿಸಿದೆ. ಕೆಲವು ಅನಿವಾರ್ಯ ಕಾರಣಾಂತರಗಳಿಂದ ಈ ನಿಧಾ೯ರ ತೆಗೆದುಕೊಂಡಿದ್ದೇನೆ. ನನಗೂ ಭಾರತದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ನನಗೂ ಆರ್​ಸಿಬಿಗೂ ಅವಿನಾಭಾವ ಸಂಬಂಧ. ಹಾಗಾಗಿ ಮುಂದೆಯೂ ಆರ್​​ಸಿಬಿಯೊಂದಿಗೆ ಇರುತ್ತೇನೆ ಎಂದು ಹೇಳಿದರು.

ನಾನು ಆರ್​​ಸಿಬಿ ಸೇರಿದ ಬಳಿಕ ಅರ್ಧ ಭಾರತೀಯನಾಗಿದ್ದೇನೆ. ಭಾರತವು ನನ್ನ ಹೃದಯದಲ್ಲಿ ವಿಶೇಷವಾಗಿ ನೆಲೆಸಿದೆ ಎಂದರು

abd and virat

ಇದೊಂದು ಅದ್ಭುತ ಪ್ರಯಾಣ. ನನಗೀಗ 37ನೇ ವರ್ಷ, ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ನನ್ನ ಮೇಲೆ ನೀವು ತೋರಿಸಿದ ಪ್ರೀತಿ ಚಿರಋಣಿ ಎಂದು ಭಾವುಕರಾದರು ಎಬಿಡಿ.

ಈ ನಡುವೆ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್, ಎಲ್ಲಾ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿರುವುದನ್ನು ಸ್ಮರಿಸಬಹುದು

error: Content is protected !!