Main News

ರಷ್ಯಾ ಬಗ್ಗೆ ಬಿಡೆನ್ ಭಾವನೆ ನನಗೆ ಗೊತ್ತು-ಪುಟಿನ್

‘ರಷ್ಯಾ ಬಗ್ಗೆ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿಯಾದ ಜೋ ಬಿಡೆನ್ ಹೊಂದಿರುವ ಭಾವನೆ ನನಗೆ ಗೊತ್ತು’ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಅಮೇರಿಕದ ಅಧ್ಯಕ್ಷೀಯ‌ ಚುಣಾವಣೆಗೆ ಇನ್ನು ಕೇವಲ 26 ದಿನಗಳಿರುವಾಗಲೇ ಪುಟಿನ್ ಅವರ ಈ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ. ಜೋ ಬಿಡೆನ್ ರಷ್ಯಾ ವಿರೋಧಿ ನಡೆಯನ್ನು ಹೊಂದಿರುವ ಬಗ್ಗೆ ವಿವರಿಸಿರುವ ಪುಟಿನ್ ‘ಟ್ರಂಪ್ ಅಧಿಕಾರದಲ್ಲಿ ಮುಂದುವರೆದರೆ ಮಾತ್ರ ನಮ್ಮ ಮತ್ತು ಅಮೇರಿಕಾದ ಬಾಂಧವ್ಯ ಉತ್ತಮವಾಗುತ್ತದೆ’ ಎಂದು ಹೇಳುವ ಮೂಲಕ ಪುಟಿನ್ ಟ್ರಂಪ್ ಪರ ತಮ್ಮ ಒಲವು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ

ಅಮೇರಿಕಾ ಚುಣಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ?

‘ಅಮೇರಿಕಾದ ಜೊತೆ ಪರಸ್ಪರ ಚುಣಾವಣೆಗಳಲ್ಲಿ ಹಸ್ತಕ್ಷೇಪ ಮಾಡದಂತೆ ಒಪ್ಪಂದಕ್ಕೆ ಇಚ್ಛಿಸಿದ್ದೆವು. ಆದರೆ ಅಮೇರಿಕದ ವೈಟ್‌ಹೌಸ್ ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ಪುಟಿನ್ ಮತ್ತೊಂದು ಬಾಂಬನ್ನು ಹಾಕಿದ್ದಾರೆ. ಇದರ ಹಿನ್ನಲೆಯಲ್ಲೇ ಅಮೇರಿಕಾಕ್ಕೆ ರಷ್ಯನ್ ಹ್ಯಾಕರ್ಸ್ ಭಯ ಪ್ರಾರಂಭವಾಗಿದೆ. ಏಕೆಂದರೆ ಟ್ರಂಪ್ ಗೆಲುವಿಗೆ ರಷ್ಯಾ ಹ್ಯಾಕರ್‌ಗಳು ಮತದಾರರ ಮಾಹಿತಿ ಕದಿಯಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ.

2016ರ ಅಧ್ಯಕ್ಷೀಯ ‌ಚುಣಾವಣೆಗಳಲ್ಲಿ ಹಿಲರಿ ಕ್ಲಿಂಟನ್ ಎದುರು ಟ್ರಂಪ್‌ ರಿಪಬ್ಲಿಕನ್ ಪಾರ್ಟಿಯಿಂದ ಸ್ಪರ್ಧಿಸಿದ್ದಾಗ ಕ್ಲಿಂಟನ್ ಹೀನಾಯ ಸೋಲು ಅನುಭವಿಸಿದ್ದರು. ಆಗಲೂ ಸಹ ರಷ್ಯಾ ಮತದಾರರ ಮಾಹಿತಿ‌ ಕದ್ದು ಟ್ರಂಪ್ ಅವರನ್ನು ಗೆಲ್ಲಿಸಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೇ ಅಮೇರಿಕಾ ಗುಪ್ತಚರ ಇಲಾಖೆ ರಷ್ಯಾದ ಸೈಬರ್ ಹ್ಯಾಕಿಂಗ್ ಬಗ್ಗೆ ಕೆಲವು ಸಾಕ್ಷ್ಯಗಳನ್ನೂ ಸಂಗ್ರಹಿಸಿತ್ತು. ಆದರೆ ಆ ಸಾಕ್ಷ್ಯಗಳು ರಷ್ಯಾದ ತಪ್ಪನ್ನು ಸಾಬೀತು ಮಾಡುವಷ್ಟು ಪ್ರಭಲವಾಗಿರಲಿಲ್ಲ. ಖುದ್ದು ಟ್ರಂಪ್ ಅವರ ಪಕ್ಷದವರೇ ರಷ್ಯಾದ ಸೈಬರ್ ಕಳ್ಳರು ಮತದಾರರ ಮಾಹಿತಿ ಕದ್ದು ಟ್ರಂಪ್ ಅವರನ್ನು ಗೆಲ್ಲಿಸಲಾಗಿದೆ ಎಂದು ಆರೋಪಿಸಿತ್ತು. ಆದರೆ ಟ್ರಂಪ್ ಇದನ್ನು ನಿರಾಕರಿಸದೇ ನನ್ನ ಬಗ್ಗೆ ಆರೋಪ ಮಾಡುತ್ತಿರುವವರೇ ಸುಳ್ಳುಗಾರರು ಎಂದು ಹೇಳಿ ಜಾರಿಕೊಂಡಿದ್ದರು. ರಷ್ಯಾವೂ ಸಹ ಅಮೇರಿಕಾದ ಆರೋಪವನ್ನು‌ ತಿರಸ್ಕರಿಸಿತ್ತು.

ಏನೇ ಆಗಲಿ, ಈ ಬಾರಿ ಅಮೇರಿಕಾದ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲದ ಜೊತೆ ರಷ್ಯಾವು ಅಮೇರಿಕಾದ ಚುಣಾವಣೆಯಲ್ಲಿ‌ ಹಸ್ತಕ್ಷೇಪ‌ ಮಾಡುವುದು ನಿಜವೇ ಎಂದು ಕಾದು ನೋಡಬೇಕು.

Team Newsnap
Leave a Comment
Share
Published by
Team Newsnap

Recent Posts

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ

ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)… Read More

May 15, 2024

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ

ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More

May 15, 2024

ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು : ಅಮಿತ್‌ ಶಾ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಷಾ ಬುಧವಾರ ಪಾಕ್ ಆಕ್ರಮಿತ ಕಾಶ್ಮೀರ (POK) ಮೇಲೆ ಭಾರತದ ಸಾರ್ವಭೌಮತ್ವವನ್ನು… Read More

May 15, 2024

ಪೆನ್ ಡ್ರೈವ್ ಕೇಸ್: ಹಾಸನದ 18 ಕಡೆಗಳಲ್ಲಿ ಎಸ್ ಐಟಿ ಶೋಧ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಹೊಂದಿದ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ… Read More

May 15, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 15 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,750 ರೂಪಾಯಿ ದಾಖಲಾಗಿದೆ. 24… Read More

May 15, 2024

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024