‘ರಷ್ಯಾ ಬಗ್ಗೆ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿಯಾದ ಜೋ ಬಿಡೆನ್ ಹೊಂದಿರುವ ಭಾವನೆ ನನಗೆ ಗೊತ್ತು’ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಅಮೇರಿಕದ ಅಧ್ಯಕ್ಷೀಯ ಚುಣಾವಣೆಗೆ ಇನ್ನು ಕೇವಲ 26 ದಿನಗಳಿರುವಾಗಲೇ ಪುಟಿನ್ ಅವರ ಈ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ. ಜೋ ಬಿಡೆನ್ ರಷ್ಯಾ ವಿರೋಧಿ ನಡೆಯನ್ನು ಹೊಂದಿರುವ ಬಗ್ಗೆ ವಿವರಿಸಿರುವ ಪುಟಿನ್ ‘ಟ್ರಂಪ್ ಅಧಿಕಾರದಲ್ಲಿ ಮುಂದುವರೆದರೆ ಮಾತ್ರ ನಮ್ಮ ಮತ್ತು ಅಮೇರಿಕಾದ ಬಾಂಧವ್ಯ ಉತ್ತಮವಾಗುತ್ತದೆ’ ಎಂದು ಹೇಳುವ ಮೂಲಕ ಪುಟಿನ್ ಟ್ರಂಪ್ ಪರ ತಮ್ಮ ಒಲವು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ
ಅಮೇರಿಕಾ ಚುಣಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ?
‘ಅಮೇರಿಕಾದ ಜೊತೆ ಪರಸ್ಪರ ಚುಣಾವಣೆಗಳಲ್ಲಿ ಹಸ್ತಕ್ಷೇಪ ಮಾಡದಂತೆ ಒಪ್ಪಂದಕ್ಕೆ ಇಚ್ಛಿಸಿದ್ದೆವು. ಆದರೆ ಅಮೇರಿಕದ ವೈಟ್‌ಹೌಸ್ ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ಪುಟಿನ್ ಮತ್ತೊಂದು ಬಾಂಬನ್ನು ಹಾಕಿದ್ದಾರೆ. ಇದರ ಹಿನ್ನಲೆಯಲ್ಲೇ ಅಮೇರಿಕಾಕ್ಕೆ ರಷ್ಯನ್ ಹ್ಯಾಕರ್ಸ್ ಭಯ ಪ್ರಾರಂಭವಾಗಿದೆ. ಏಕೆಂದರೆ ಟ್ರಂಪ್ ಗೆಲುವಿಗೆ ರಷ್ಯಾ ಹ್ಯಾಕರ್‌ಗಳು ಮತದಾರರ ಮಾಹಿತಿ ಕದಿಯಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ.
2016ರ ಅಧ್ಯಕ್ಷೀಯ ಚುಣಾವಣೆಗಳಲ್ಲಿ ಹಿಲರಿ ಕ್ಲಿಂಟನ್ ಎದುರು ಟ್ರಂಪ್ ರಿಪಬ್ಲಿಕನ್ ಪಾರ್ಟಿಯಿಂದ ಸ್ಪರ್ಧಿಸಿದ್ದಾಗ ಕ್ಲಿಂಟನ್ ಹೀನಾಯ ಸೋಲು ಅನುಭವಿಸಿದ್ದರು. ಆಗಲೂ ಸಹ ರಷ್ಯಾ ಮತದಾರರ ಮಾಹಿತಿ ಕದ್ದು ಟ್ರಂಪ್ ಅವರನ್ನು ಗೆಲ್ಲಿಸಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೇ ಅಮೇರಿಕಾ ಗುಪ್ತಚರ ಇಲಾಖೆ ರಷ್ಯಾದ ಸೈಬರ್ ಹ್ಯಾಕಿಂಗ್ ಬಗ್ಗೆ ಕೆಲವು ಸಾಕ್ಷ್ಯಗಳನ್ನೂ ಸಂಗ್ರಹಿಸಿತ್ತು. ಆದರೆ ಆ ಸಾಕ್ಷ್ಯಗಳು ರಷ್ಯಾದ ತಪ್ಪನ್ನು ಸಾಬೀತು ಮಾಡುವಷ್ಟು ಪ್ರಭಲವಾಗಿರಲಿಲ್ಲ. ಖುದ್ದು ಟ್ರಂಪ್ ಅವರ ಪಕ್ಷದವರೇ ರಷ್ಯಾದ ಸೈಬರ್ ಕಳ್ಳರು ಮತದಾರರ ಮಾಹಿತಿ ಕದ್ದು ಟ್ರಂಪ್ ಅವರನ್ನು ಗೆಲ್ಲಿಸಲಾಗಿದೆ ಎಂದು ಆರೋಪಿಸಿತ್ತು. ಆದರೆ ಟ್ರಂಪ್ ಇದನ್ನು ನಿರಾಕರಿಸದೇ ನನ್ನ ಬಗ್ಗೆ ಆರೋಪ ಮಾಡುತ್ತಿರುವವರೇ ಸುಳ್ಳುಗಾರರು ಎಂದು ಹೇಳಿ ಜಾರಿಕೊಂಡಿದ್ದರು. ರಷ್ಯಾವೂ ಸಹ ಅಮೇರಿಕಾದ ಆರೋಪವನ್ನು ತಿರಸ್ಕರಿಸಿತ್ತು.
ಏನೇ ಆಗಲಿ, ಈ ಬಾರಿ ಅಮೇರಿಕಾದ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲದ ಜೊತೆ ರಷ್ಯಾವು ಅಮೇರಿಕಾದ ಚುಣಾವಣೆಯಲ್ಲಿ ಹಸ್ತಕ್ಷೇಪ ಮಾಡುವುದು ನಿಜವೇ ಎಂದು ಕಾದು ನೋಡಬೇಕು.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ