ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಈ ಹಿಂದೆ ನೀಡಿದ್ದ 164 ಹೇಳಿಕೆ ಈಗಲೂ ಬದ್ಧಳಾಗಿರುತ್ತೇನೆ. ಸಿಡಿ ಲೇಡಿ ಉಲ್ಟಾ ಹೊಡೆದಿದ್ದಾರೆ ಎನ್ನುವುದು ಶುದ್ದ ಸುಳ್ಳು ಎಂದು ಸಿಡಿ ಸಂತ್ರಸ್ತೆ ಇಂದು ಬಿಡುಗಡೆ ಮಾಡಿರುವ ವಿಡಿಯೋ ಹಾಗೂ ಪತ್ರದಲ್ಲಿ ಸ್ಪಷ್ಟನೆ ನೀಡಿದ್ದಾಳೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸಂತ್ರಸ್ತ ಯುವತಿ ನಿನ್ನೆ ಸಹ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸಂತ್ರಸ್ತ ಯುವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆಂದು ವರದಿಯಾಗಿತ್ತು.
ಪತ್ರದಲ್ಲಿ ಏನಿದೆ..?
ಏ. 12 ರಂದು ಮಾಧ್ಯಮಗಳಲ್ಲಿ ನಾನು ತನಿಖಾಧಿಕಾರಿಗಳ ಮುಂದೆ ಪ್ರಕರಣದ ಸಂಬಂಧ ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡಿದ್ದೇನೆ, ನಾನು ನೀಡಿದ ದೂರು ಮತ್ತು ನ್ಯಾಯಾಧೀಶರ ಸಮ್ಮುಖದಲ್ಲಿ ಕೊಟ್ಟ 164 ಹೇಳಿಕೆ ಒತ್ತಡದಿಂದ ನೀಡಿದ್ದೇನೆ ಆದ್ದರಿಂದ ಮತ್ತೊಮ್ಮೆ ಹೇಳಿಕೆ ಪಡೆಯಬೇಕೆಂದು ತನಿಖಾಧಿಕಾರಿಗಳಿಗೆ ಕೇಳಿಕೊಂಡಿದ್ದಾಗಿ ವರದಿ ಆಗಿದೆ. ಇದು ಸತ್ಯಕ್ಕೆ ದೂರವಾಗಿರುತ್ತದೆ. ನಾನು ಈಗಲೂ ಕೂಡಾ ಈ ಮುಂಚೆ ನೀಡಿದ್ದ ಹೇಳಿಕೆಗೆ ಬದ್ದಳಾಗಿರುತ್ತೇನೆ.
ನನ್ನ ಪೋಷಕರೊಂದಿಗೆ ಮಾತನಾಡಿ ನನ್ನ ಮನ ಪರಿವರ್ತನೆಯಾಗಿ ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಇದು ಸತ್ಯಕ್ಕೆ ದೂರ ಎಂದಿದ್ದಾರೆ.
ನಾನು ಈ ಪ್ರಕರಣದಲ್ಲಿ ನಿನ್ನೆ ತನಿಖಾಧಿಕಾರಿಗಳ ಎದುರು ಕೆಲವು ಮಾಹಿತಿಗಳನ್ನು ಒದಗಿಸಲು ಸಮಯಾವಕಾಶ ಕೋರಿ ಹಾಜರಾಗಿದ್ದೆ. ಬೇರೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿರುವುದಿಲ್ಲ. ನನ್ನ ವಕೀಲರೊಂದಿಗೆ ಎಸ್ಐಟಿಗೆ ಹೋಗುವ ಕುರಿತು ಮುಂಚೆಯೇ ಮಾಹಿತಿ ನೀಡಿರುತ್ತೇನೆ. ಈಗಾಗಲೇ ನಾನು ಪೊಲೀಸ್ ಆಯುಕ್ತರಿಗೆ ಪ್ರಕರಣದ ಆರೋಪಿ ರಮೇಶ ಜಾರಕಿಹೊಳಿಯವರನ್ನು ವಿಚಾರಣೆಗೆ ಕರೆಸದಿರುವ ಕುರಿತು ದೂರು ನೀಡಿದ್ದೇನೆ ಎಂದು ಹೇಳಿದ್ದಾಳೆ.
ಜಾರಕಿಹೊಳಿ ಕೊರೊನಾ ಪೀಡಿತರಂತೆ ನಟಿಸುತ್ತಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿಯನ್ನು ಸೃಷ್ಟಿಸಿ ನನ್ನ ವಿರುದ್ಧ ಷಡ್ಯಂತ್ರ ಮಾಡಿರುವ ಸಾಧ್ಯತೆ ಎಂಬ ಸಂಶಯ ವ್ಯಕ್ತ ಪಡಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ