ಮಂಡ್ಯ: ಸಂಸದೆ ಸುಮಲತಾ ಮೈತ್ರಿ ಟಿಕೆಟ್ ಸಿಗತ್ತೋ? ಸಿಗಲ್ವೋ ಎಂಬ ಡೌಟ್ ನನಗೆ ಇಲ್ಲ. ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಡ್ಯದಲ್ಲಿ ಮಾತಾಡಿದ ಸಂಸದೆ , ಜೆಡಿಎಸ್‍ನವರು (JDS) ನನಗೆ ಟಿಕೆಟ್ ಸಿಕ್ಕರೆ ಮೈತ್ರಿ ಧರ್ಮ ಪಾಲನೆ ಜೆಡಿಎಸ್‍ನವರು ಮಾಡುತ್ತಾರೆ ಎಂಬ ನಂಬಿಕೆ ನಂಬಿಕೆ ಇದೆ.
ಭಾನುವಾರ ಸಭೆಯಲ್ಲಿ ಬಿಜೆಪಿಯಿಂದ (BJP) ಟಿಕೆಟ್ ತೆಗೆದುಕೊಂಡು ನಿಲ್ಲಿ ಎಂದು ಹೇಳಿದ್ದು, ಮಂಡ್ಯವನ್ನು ಬಿಡಬೇಡಿ. ನಾವು ನಿಮ್ಮನ್ನು ನಂಬಿದ್ದೇವೆ ಎಂಬ ಅಭಿಪ್ರಾಯ ಬಂದಿದೆ.
ಜೆಡಿಎಸ್ ಎನ್‍ಡಿಎ ಒಂದು ಭಾಗ. ಅದೇ ರೀತಿ ನಾನು ಸಹ ಎನ್‍ಡಿಎ ಒಂದು ಭಾಗವಾಗಿದ್ದೇನೆ. ಚುನಾವಣೆಯಲ್ಲಿ ಮಹಿಳಾ ಮಿಸಲಾತಿ ತಂದಿದ್ದು ಬಿಜೆಪಿ. ಹೀಗಾಗಿ ನನಗೆ ಮಂಡ್ಯ ಟಿಕೆಟ್‍ನ್ನು ಬಿಜೆಪಿ ನೀಡಲಿದೆ ಎಂಬ ವಿಶ್ವಾಸವಿದೆ.ರವಿಕುಮಾರ್ ಗಣಿಗ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮಾಜಿ ಸಚಿವ ಪುಟ್ಟರಾಜು ಸಿದ್ಧತೆ
ಮೈತ್ರಿಯಲ್ಲಿ ಜೆಡಿಎಸ್ ವಿಶ್ವಾಸದಲ್ಲಿ ಇರುತ್ತೆ ಎಂಬ ನಂಬಿಕೆ ಇದೆ. ಟಿಕೆಟ್ ಯಾರಿಗೆ ಎಂದು ಹೇಳಬೇಕಿರೋದು ನಾಯಕರು ಎಲ್ಲವನ್ನೂ ನೋಡಿ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡುತ್ತಾರೆ. ಮುಂದೆ ಏನಾಗುತ್ತೆ ಕಾದು ನೋಡಿ ಎಂದಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ