January 8, 2025

Newsnap Kannada

The World at your finger tips!

deepa1

ಮುಂದಿನ ಜನ್ಮಕ್ಕಾಗುವಷ್ಟು ನೋವನ್ನು ಅನುಭವಿಸಿದ್ದೇನೆ

Spread the love

ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ,ಇಡೀ ದೇಹದಲ್ಲಿರುವ ನೀರು ಹಿಂಗುವಂತೆ ಕಣ್ಣೀರಾಗಿದ್ದೇನೆ,
ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ,
ಹಲವಾರು ಸಲ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಶೋಷಣೆಗೊಳಗಾಗಿದ್ದೇನೆ, ಈ ಬದುಕು ಸಾಕೆನಿಸುವಷ್ಡು ನೊಂದಿದ್ದೇನೆ,

ಜೀವನದಲ್ಲಿ ಮತ್ತೆಂದೂ ಮೇಲೇರಲು ಸಾಧ್ಯವಾಗದಷ್ಟು ಸೋತಿದ್ದೇನೆ,

ಸಮಾಜದ ಯಾರೂ ಗಮನಿಸದಷ್ಟು ಅಲಕ್ಷಿತನಾಗಿದ್ದೇನೆ,

ಇಲ್ಲಿಯವರೆಗೂ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡಿದ್ದೇನೆ,

ಅನಾಥಪ್ರಜ್ಙೆ ಹಗಲಿರುಳು ಕಾಡುತ್ತಾ ಬಸವಳಿದಿದ್ದೇನೆ,

ಆದರೂ,…………..

ಬದುಕನ್ನು ಎದುರಿಸುತ್ತಿದ್ದೇನೆ :

ಈ ಕ್ಷಣಕ್ಕೂ ನಗು ನಗುತಲಿದ್ದೇನೆ,
ಮತ್ತೆ ಮತ್ತೆ ಮನದಲ್ಲಿ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದೇನೆ,
ನಾನೀಗ ಎಲ್ಲದರಿಂದ ಮುಕ್ತ, ಸಂತೃಪ್ತ, ನಿರ್ಲಿಪ್ತ,

ಬದುಕೇನು ಭಾರವಲ್ಲ, ಅನುಭವಿಸಿ:

ಜೀವನ ಒಂದು ಅದ್ಬುತ ಮೈದಾನ ಹೊಂದಿದ ಪಾಠಶಾಲೆ – ನೆನಪಿರಲಿ,
ಓದಿ, ಬರೆಯಿರಿ, ಪ್ರವಾಸ ಮಾಡಿ,
ಸಾಧ್ಯವಾಗದಿದ್ದರೆ ಆಟವಾಡಿ.
ಮತ್ತೆಲ್ಲವೂ ನಿಮ್ಮದಾಗುತ್ತದೆ.ಇದು ಬಹುತೇಕ ಸತ್ಯ ಮತ್ತು ವಾಸ್ತವ.
ಇದರಲ್ಲಿ ನಿಮ್ಮೊಂದಿಗೆ ನಾನು.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!