December 22, 2024

Newsnap Kannada

The World at your finger tips!

WhatsApp Image 2023 05 01 at 5.46.55 PM

I have brought 3500 crore grant to Mandya district - MP Sumalatha ಮಂಡ್ಯ ಜಿಲ್ಲೆಗೆ 3500 ಕೋಟಿ ಅನುದಾನ ತಂದಿದ್ದೇನೆ - ಸಂಸದೆ ಸುಮಲತಾ

ಮಂಡ್ಯ ಜಿಲ್ಲೆಗೆ 3500 ಕೋಟಿ ಅನುದಾನ ತಂದಿದ್ದೇನೆ – ಸಂಸದೆ ಸುಮಲತಾ

Spread the love

ಹಲಗೂರು : ನಾನು ಸಂಸದೆಯಾಗಿ ಆಯ್ಕೆಯಾದ ಮೇಲೆ ಮಂಡ್ಯ ಜಿಲ್ಲೆಗೆ ವಿರೋಧ ಪಕ್ಷದವರು ಏನು ಮಾಡಿದ್ದಾರೆ. ನಾನು ದಾಖಲೆ ಸಮೇತ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದೇನೆ ಎಂದು ಹೇಳಬಲ್ಲೆ . 3500 ಕೋಟಿ ಕೇಂದ್ರ ಸರ್ಕಾರದಿಂದ ಅನುದಾನ ತಂದು ಮಳವಳ್ಳಿ ಕ್ಷೇತ್ರಕ್ಕೆ ಹೆಚ್ಚಾಗಿ ಅನುದಾನ ನೀಡಿದ್ದೇನೆ, ನಾನು ತಂದ ಅನುದಾನವನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಎಂದು ಸಂಸದೆ ಸುಮಲತಾ ದೂರಿದರು

ಹಲಗೂರಿನ ವಿನಾಯಕ ಕಲ್ಯಾಣ ಮಂಟಪದಲ್ಲಿ ಮಳವಳ್ಳಿ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರಾಜ್ ಪರವಾಗಿ ಮತಯಾಚನೆ ಮಾಡಿ ಸಂದರ್ಭದಲ್ಲಿ ಮಾತನಾಡಿ.

ನಾನು ನಿಮ್ಮ ತಾಲೂಕಿನ ಹುಚ್ಚೇಗೌಡರ ಸೊಸೆ ಅಂಬರೀಶ್ ರವರ ಪತ್ನಿ ಎಂದೇ ಗುರುತಿಸಿ,ನಾನು ಪಕ್ಷೇತರವಾಗಿ ಸ್ಪರ್ಧಿಸಿದಾಗ ನನಗೆ ನೀವುಗಳು ಆಶೀರ್ವದಿಸಿದ್ದೀರಿ , ನಾನು ಕಷ್ಟದಲ್ಲಿದ್ದಾಗ ನನ್ನನ್ನು ಸಂಸದೆಯಾಗಿ ಮಾಡಲು ಸಹಕರಿಸಿದ್ದಾರೆ, ಅದರ ಋಣ ನನ್ನ ಮೇಲೆ ಇದೆ ,ಅದಕ್ಕಾಗಿ ಈ ತಾಲೂಕಿಗೆ ಕೇಂದ್ರ ಸರ್ಕಾರದಿಂದ ಸಿಗುವ ಎಲ್ಲಾ ತರಹದ ಯೋಜನೆಗಳನ್ನು ತಂದು ಅಭಿವೃದ್ಧಿಪಡಿಸಿದ್ದೇನೆ ಎಂದರು.

ನಾನು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಇಲ್ಲಿನ ಶಾಸಕರು ಆರೋಪಿಸುತ್ತಾರೆ.
ನರೇಂದ್ರ ಮೋದಿ ಅವರ ಸಹಕಾರದಿಂದ ಜಲಜೀವನ್ ಮಿಷನ್ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಧಾನ ಮಂತ್ರಿ ಆದರ್ಶ ಯೋಜನೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ರಸ್ತೆ ಮನೆಗಳು ಮೂಲಭೂತ ಸೌಕರ್ಯ ಶಾಲಾ ಕಾಂಪೌಂಡು ಆಸ್ಪತ್ರೆಗಳ ಕಾಂಪೌಂಡ್ ಇಷ್ಟೆಲ್ಲಾ ಕೆಲಸವನ್ನು ಪಕ್ಷೇತರ ಸಂಸದೆಯಾದ ನಾನು ಮಾಡೊದಕ್ಕೆ ಸಾದ್ಯವಾಗಿದೆ ಎಂದು ಹೇಳಿದರು.

ನನ್ನ ಅನುದಾನವನ್ನು ನಾನು ತಂದಿದ್ದೇನೆ ಎಂದು ಹೇಳಿಕೊಂಡು ಕೆಲಸವನ್ನು ಮಾಡಿದ್ದಾರೆ ಅದು ಸರಿಯಲ್ಲ ಎಂದರು.

ಕೋವಿಡ್ ಇದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ದೊರಕಲಿಲ್ಲ, ಆಗ ನಾನು ನನ್ನ ವೆಚ್ಚದಲ್ಲಿ ಆಂಬುಲೆನ್ಸ್ ಹಾಗೂ ಆಕ್ಸಿಜನ್ ಕೊಡಿಸುವ ನಿಟ್ಟಿನಲ್ಲಿಇತರೆ ಸಹಾಯವನ್ನು ಮಾಡಿದ್ದೇನೆ ನಾನು ಕುಟುಂಬದ ರಾಜಕಾರಣಿ ಮಾಡುತ್ತಿಲ್ಲ ಅಂಬರೀಶ್ ಬದುಕಿದ್ದಾಗ, ನನ್ನನ್ನು ರಾಜಕೀಯಕ್ಕೆ ಬರುವುದಕ್ಕೂ ಸಹ ಕರೆಯಲಿಲ್ಲ ಆದರೆ ಅವರ ನಿಧನ ನಂತರ ಅವರ ಅಭಿಮಾನಿಗಳ ಒತ್ತಡಕ್ಕೆ ಸೋತು ನಾನು ಸಂಸದೆಯ ಸ್ಥಾನಕ್ಕೆ ನಿಲ್ಲಬೇಕಾಗಿತ್ತು. ನಿಮ್ಮಗಳ ಆಶೀರ್ವಾದದಿಂದ ನಾನು ಲೋಕಸಭೆಗೆ ಸ್ಪರ್ಧಿಸಿ ವಿಜೇತಳಾದೆ ಆದರೆ ನನಗೆ ನೀಡಿದ ಕಿರುಕುಳ ಸರಿಯಲ್ಲ ನನಗೆ ಭಾರೀ ತೇಜೋವದೆ ಮಾಡಿದರು ನನಗೆ ನಿಮ್ಮ ಆಶೀರ್ವಾದ ಕವಚವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು.

ಬಿಜೆಪಿ ಅಭ್ಯರ್ಥಿ ಮುನಿರಾಜ್ ಮಾತನಾಡಿ ,ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಹಲವಾರು ವರ್ಷಗಳು ಶಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಆದರೆ ಇದುವರೆಗೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋದರು, ಲಂಚ ನೀಡದೆ ಕೆಲಸಗಳು ಆಗುತ್ತಿಲ್ಲ ಆದುದರಿಂದ ಜನತೆ ಬದಲಾವಣೆಯನ್ನು ಬಯಸಿದ್ದಾರೆ.

ನಾನು ನಿಮ್ಮ ಮನೆಯ ಸೇವಕನಾಗಿ ನಿಮ್ಮಗಳ ಸೇವೆ ಮಾಡಲು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದೇನೆ ,ನನಗೆ ಆಶೀರ್ವದಿಸಿ ನಿಮ್ಮ ಮನೆಯ ಮಗನಾಗಿಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮತಯಾಚಿಸಿದರು.

ಇದೇ ಸಂದರ್ಭದಲ್ಲಿ ಯಮದೂರ್ ಸಿದ್ದರಾಜು, ಮತ್ತು ಎಚ್ ಆರ್ ಅಶೋಕ್ ಕುಮಾರ್ ಸಭೆ ಉದ್ದೇಶಿಸಿ, ಮಾತನಾಡಿದರು.ಬಿಜೆಪಿಯ ಪ್ರಜಾ ಪ್ರಣಾಳಿಕೆ ಬಿಡುಗಡೆ : ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧಲೀಟರ್ ನಂದಿನಿ ಹಾಲು

ವೇದಿಕೆಯಲ್ಲಿ ಶಾರದ ಮುನಿರಾಜ್ , ಮುಖಂಡರುಗಳಾದ ಎಚ್.ಎಂ. ಶಿವಸ್ವಾಮಿ , ಕೃಷ್ಣ. ಕುಮಾರ ,ನಾಗೇಶ್, ಎನ್. ಕೆ. ಕುಮಾರ್, ಲ್ಯಾಬ್ ಕೃಷ್ಣೇಗೌಡ , ಬಾಲ ಚಂದ್ರ ಸೇರಿದಂತೆ ಇತರರು ಇದ್ದರು.

Copyright © All rights reserved Newsnap | Newsever by AF themes.
error: Content is protected !!