January 7, 2025

Newsnap Kannada

The World at your finger tips!

dinesh

6 ಸಚಿವರ ಅಕ್ರಮ ದಾಖಲೆಗಳು ನನ್ನ ಬಳಿ ಇವೆ- ದಿನೇಶ್ ಕಲ್ಲಹಳ್ಳಿ

Spread the love

6 ಸಚಿವರ ಅಕ್ರಮದ ಬಗ್ಗೆ ನನ್ನ ಬಳಿ ದಾಖಲೆಯಿದೆ. ಆ ಆರು ಮಂದಿ ಸಚಿವರು ಯಾವ ಕಾರಣಕ್ಕೆ ಕೋರ್ಟ್‌ ಮೊರೆ ಹೋಗಿದ್ದಾರೆ ಎಂಬುದು ನಂಗೆ ಗೊತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕನಕಪುರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ ಆ 6 ಮಂದಿ ಮಾಡಿರುವ ಎಲ್ಲಾ ಅಕ್ರಮ ಗಳ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ. ಕಾನೂನಾತ್ಮಕವಾಗಿ ವಕೀಲರೊಂದಿಗೆ ಚರ್ಚಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

5 ಕೋಟಿ ರು ಕೊಟ್ಟಿದ್ದು ಯಾರು, ಎಲ್ಲಿ ?

ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದಲ್ಲಿ 5 ಕೋ. ರೂ. ಡೀಲ್‌ ನಡೆದಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ, ಆ ಡೀಲ್‌ ಎಲ್ಲಿ, ಹೇಗೆ ನಡೆಯಿತು? ಯಾರ ಮೂಲಕ, ಯಾರಿಗೆ ಹಣ ತಲುಪಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಅವರು ತಮ್ಮಲ್ಲಿರುವ ಮಾಹಿತಿಯನ್ನು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಮತ್ತು ಮಾಧ್ಯಮಗಳಿಗೆ ಹಂಚಿಕೊಳ್ಳಬೇಕು ಎಂದರು.

Copyright © All rights reserved Newsnap | Newsever by AF themes.
error: Content is protected !!