January 8, 2025

Newsnap Kannada

The World at your finger tips!

appu cm

ಆರು ಕೋಟಿ ಜನರ ಪರವಾಗಿ ಅಪ್ಪುಗೆ ಆ ಮುತ್ತು ಕೊಟ್ಟೆ: ಸಿಎಂ

Spread the love

ಆರು ಕೋಟಿ ಜನರ ಪರವಾಗಿ ಅಪ್ಪುಗೆ ನಾನು ಆ ಮುತ್ತು ಕೊಟ್ಟೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕವಾಗಿ ನುಡಿದರು.

ಪುನೀತ್‌ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಪುನೀತ್‌ ರಾಜ್‌ಕುಮಾರ್‌ ಒಂದು ಮುತ್ತು ಕೊಟ್ಟೆ. ಅದು ಹೃದಯದಿಂದ ಬಂದಿದ್ದು. ರಾಜ್ಯದ 6 ಕೋಟಿ ಜನರ ಪರವಾಗಿ ಮುತ್ತು ಕೊಟ್ಟೆ ಎಂದರು

ಅಪ್ಪು ನಮ್ಮೆಲ್ಲರಿಗೂ ಬಹಳ ಆತ್ಮೀಯ. ಅವರನ್ನು ನಾನು ಬಾಲ್ಯದಿಂದಲೂ ಬಲ್ಲೆ. ಬಾಲ್ಯದಲ್ಲೇ ಪ್ರತಿಭೆಯ ಚಿಲುಮೆ ಹೊಂದಿದ್ದವರು ಅಪ್ಪು. ಕರ್ನಾಟಕ ಇತಿಹಾಸದಲ್ಲೇ ಬಾಲನಟನಾಗಿ ಪ್ರಶಸ್ತಿ ಪಡೆದುಕೊಂಡದ್ದು ಹೆಗ್ಗಳಿಕೆ ಎಂದು ತಿಳಿಸಿದರು.

ಬಾಲಕನಿಂದಲೂ ಆತ ಅದ್ಭುತ ನಟ. ತಂದೆಯಂತೆಯೇ ನಯ-ವಿನಯ ರೂಢಿಸಿಕೊಂಡು ಬೆಳೆದರು ಅಪ್ಪು. ಅವರ ಅಂತಿಮ ದರ್ಶನವನ್ನೂ ಅಭಿಮಾನಿಗಳು ಯಾವುದೇ ತೊಂದರೆಯಾಗದಂತೆ ನಡೆಸಿಕೊಡಲು ಅನುವು ಮಾಡಿಕೊಟ್ಟರು ಎಂದರು

ತನ್ನ ನಟನೆಯ ಮೂಲಕವೇ ಆರು ಕೋಟಿ ಜನರ ಮನಸ್ಸನ್ನು ಆಕರ್ಷಿಸಿದ್ದ ಅಪ್ಪು. ಅಭಿಮಾನಿಗಳ ಪರವಾಗಿ ನಾನು ಪುನೀತ್‌ ಹಣೆಗೆ ಮುತ್ತುಕೊಟ್ಟೆ ಎಂದು ನೆನೆದರು.

Copyright © All rights reserved Newsnap | Newsever by AF themes.
error: Content is protected !!