November 16, 2024

Newsnap Kannada

The World at your finger tips!

lakshman

ನಾನು ರೇಪ್ ಮಾಡಿಲ್ಲ : ಯಾವ ತಪ್ಪು ಮಾಡಿದ್ದೆ? – ಟಿಕೆಟ್ ಕೈತಪ್ಪಿದ್ದಕ್ಕೆ ಸವದಿ ವಿಷಾದ

Spread the love

ಯಾವುದೇ ಕಾರಣವಿಲ್ಲದೆ ನನ್ನನ್ನು ಯಾಕೆ ಡಿಸಿಎಂ ಸ್ಥಾನದಿಂದ ತೆಗೆದು ಹಾಕಿದಿರಿ. ನಾನು ಏನ್ ತಪ್ಪು ಮಾಡಿದ್ದೆ, ಯಾರನ್ನಾದರೂ ರೇಪ್ ಮಾಡಿದ್ನಾ? ಯಾವ ಅಪರಾಧದ ಮೇಲೆ ತೆಗೆದು ಹಾಕಿದ್ರಿ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಗುರುವಾರ ಚಿಕ್ಕೋಡಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, ಡಿಸಿಎಂ ಸ್ಥಾನ ಕೊಡಬೇಕೆಂದು ನಾನು ಕೇಳಿರಲಿಲ್ಲ. ಆದರೂ ಸೋತವನಿಗೆ ಅಧಿಕಾರ ಕೊಟ್ಟರು. ನಾನು ನಿಷ್ಠೆಯಿಂದ ಕೆಲಸ ಮಾಡಿದೆ. ಈಗ ನನಗೆ ಅನ್ಯಾಯ ಮಾಡಿದರು. ಹೀಗಾಗಿ ಮೊದಲು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ಬಿಡುವುದು ನನ್ನ ನಿರ್ಧಾರ ಅಚಲ. ಅದನ್ನು ಪ್ರಕಟ ಮಾಡುವ ಪೂರ್ವದಲ್ಲಿ ಏನು ಹೇಳಲ್ಲ. ಪಕ್ಷದಿಂದ ಹೊರಗೆ ಬಂದು ಮುಂದಿನ ತೀರ್ಮಾನ ಮಾಡುವೆ. ಅಥಣಿ ಹೈಕಮಾಂಡ್ ತೀರ್ಮಾನ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಿಎಂ ಬೊಮ್ಮಾಯಿ ಅವರಿಂದಲೇ ನಿಮಗೆ ಟಿಕೆಟ್ ಕೈತಪ್ಪಿತ್ತಾ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೊಮ್ಮಾಯಿ ಅವರು ಹಳೆ ಸ್ನೇಹಿತರು. ಅವರೊಂದು ಪಕ್ಷ, ನಾನೊಂದು ಪಕ್ಷದಲ್ಲಿ ಇದ್ದೆವು. ಅವರ ವಿಚಾರಧಾರೆ ಬೇರೆ ನನ್ನ ವಿಚಾರಧಾರೆ ಬೇರೆ ಆಗಿತ್ತು. ಆನಂತರ ಒಂದೇ ಪಕ್ಷದಲ್ಲಿ ಒಟ್ಟಾಗಿ, ನಾನು ಅವರು ಸಚಿವರಾಗಿ ಕೂಡಿ ಕೆಲಸ ಮಾಡಿದ್ದೇವೆ. ಅನೇಕ ಮುಖಂಡರು ನನ್ನ ನಿರ್ಲಕ್ಷ್ಯ ಮಾಡಿದ್ದಕ್ಕೆ ಬೇಸರವಾಗಿದೆ. ಆದರೆ ಬೊಮ್ಮಾಯಿ ಮನಸ್ಸು ಮಾಡಿದ್ದರೆ ನನಗೆ ಟಿಕೆಟ್ ಕೊಡಿಸಬಹುದಿತ್ತು ಎಂದು ಹೇಳಿದರು.

ಟಿಕೆಟ್ ತಪ್ಪಿದ್ದಕ್ಕೆ ಪಕ್ಷ ಬಿಡ್ತಿದ್ದಾರೆ ಅಂತಾ ಮೇಲ್ನೋಟಕ್ಕೆ ಕಾರಣ ಅನಿಸುತ್ತದೆ. ಆದರೆ ನನಗಾಗಿರುವ ನೋವು, ಹಿಂಸೆ ಬಹಳಷ್ಟು ಇದೆ. ಆಂತರಿಕ ಹಿಂಸೆಗಳು ಜಿಲ್ಲೆ, ರಾಜ್ಯದಲ್ಲಿ ಅನುಭವಿಸಿರುವೆ. ನನ್ನ ಪಕ್ಷ ತಾಯಿ ಅಂತಾ ತಿಳಿದು ಸುಮ್ಮನಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ವೇದಿಕೆ ಹಂಚಿಕೊಳ್ಳಲು ಆಗಿಲ್ಲ. ನನ್ನ ನೋವು ತಡೆದುಕೊಂಡು ಬಂದಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೇರ್ಪಡೆಗೆ ಸವದಿ ಷರತ್ತು- ಇಕ್ಕಟ್ಟಿನಲ್ಲಿ ನಾಯಕರು

ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಸಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬರುವ ಮುನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಹಿರಿಯ ನಾಯಕ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿ. ಕಾಂಗ್ರೆಸ್ ಸೇರ್ಪಡೆಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎಂದು ಗೊತ್ತಾಗಿದೆ

ತಮ್ಮ‌ ಪುತ್ರ ಚಿದಾನಂದ ಸವದಿಗೆ ಅಥಣಿಯಿಂದಲೇ ಟಿಕೆಟ್ ನೀಡಬೇಕು ಹಾಗೂ
ಮಗನಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್​ ನಲ್ಲಿ ಯಾರೂ ಬಂಡಾಯ ಏಳಬಾರದು ಎಂದು ಲಕ್ಷ್ಮಣ್ ಸವದಿ ಷರತ್ತು ಹಾಕಿದ್ದಾರಂತೆ. ವೈಎಸ್ ವಿ ದತ್ತ ಕಡೂರು ಜೆಡಿಎಸ್ ಅಭ್ಯರ್ಥಿ : ಎಚ್ ಡಿ ರೇವಣ್ಣ ಘೋಷಣೆ

ಈ ಷರತ್ತುಗಳನ್ನು ಕಾಂಗ್ರೆಸ್​ ನಾಯಕರ ಮುಂದೆ ಇಟ್ಟು ನಾಳೆ (ಶುಕ್ರವಾರ)ಮಧ್ಯಾಹ್ನ 2 ಗಂಟೆಯೊಳಗಾಗಿ ನಿರ್ಧಾರ ತಿಳಿಸುವಂತೆ ಗಡುವು ನೀಡಿದ್ದಾರೆ.

ಸವದಿ ಬೇಡಿಕೆ ಕುರಿತು ಕಾಂಗ್ರೆಸ್ ಹೈಕಮಾಂಡ್​ನಿಂದ ಬೆಳಗಾವಿ ಜಿಲ್ಲಾ ನಾಯಕರ ಜೊತೆ ಸತೀಶ್ ಜಾರಕಿಹೊಳಿ ಜೊತೆ ಚರ್ಚಿಸುವಂತೆ ಹೇಳಿದೆ. ಸವದಿ ಅವರ ಈ ಷರತ್ತುಗಳಿಂದ ಬೆಳಗಾವಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ.

Copyright © All rights reserved Newsnap | Newsever by AF themes.
error: Content is protected !!