December 28, 2024

Newsnap Kannada

The World at your finger tips!

priyank g

ನಾನೇ ಸಿಎಂ ಮುಖ; ಉ.ಪ್ರ ಚುನಾವಣೆಗೂ ಮುನ್ನ ಪ್ರಿಯಾಂಕಾ ಗಾಂಧಿ ಘೋಷಣೆ – ಪಕ್ಷ ಮೌನ

Spread the love

ಉತ್ತರ ಪ್ರದೇಶಕ್ಕೆ ‘ನಾನೇ ಸಿಎಂ ಮುಖ’ ಎಂದು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ಘೋಷಣೆ ಮಾಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್​ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.

ಈ ವೇಳೆ ಮಾಧ್ಯಮಗಳು ನಿಮ್ಮ ಪಕ್ಷದಿಂದ ಸಿಎಂ ಅಭ್ಯರ್ಥಿ ಯಾರು ಎಂದು ಕೇಳಿದ್ದಕ್ಕೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ, ನಿಮಗೆ ಬೇರೆ ಮುಖ (ಸಿಎಂ ಅಭ್ಯರ್ಥಿ ಸ್ಥಾನಕ್ಕೆ ) ಕಾಣುತ್ತಿದೆಯೇ? ನಂತರ..? ಸಿಎಂ ಅಭ್ಯರ್ಥಿಯಾಗಿ ನನ್ನ ಮುಖವನ್ನು ನೋಡಬಹುದಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಕಾಂಗ್ರೆಸ್​ನಿಂದ ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿ
ನಾನೇ ಅನ್ನೋ ಸುಳಿವು ನೀಡಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.
ಅಂದ್ಹಾಗೆ ಕಾಂಗ್ರೆಸ್​ ಇನ್ನೂ ಉತ್ತರ ಪ್ರದೇಶಕ್ಕೆ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

Copyright © All rights reserved Newsnap | Newsever by AF themes.
error: Content is protected !!