February 25, 2026

Newsnap Kannada

The World at your finger tips!

MP,mandya,election

Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತ ನಾನು ಹೇಳಿಲ್ಲ – ಸಂಸದೆ ಸುಮಲತಾ ಯೂಟರ್ನ್

Spread the love

ನಾನು ಕೆ ಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಅಂತ ಹೇಳಿಯೇ ಇಲ್ಲ ಎಂದು ಸಂಸದೆ ಸುಮಲತಾ ಯೂಟನ್೯ ಹೊಡೆದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ. ನನಗೆ ಈಗಲೂ ಗಣಿಗಾರಿಕೆಯಿಂದ ಕೆ ಆರ್ ಎಸ್ ಡ್ಯಾಂ ನಲ್ಲಿ ಬಿರುಕು ಕಾಣಿಸಿಕೊಳ್ಳುವಂತ ಆತಂಕವಿದೆ ಎಂದರು.

ಸಂಸದೆ ಸುಮಲತಾ ಈ ಹೇಳಿಕೆ ನೀಡುವ ಮೂಲಕ ತಮ್ಮ ವಿವಾದದ ಕಿಡಿಯಿಂದ ಯೂಟರ್ನ್ ಹೊಡೆದಿದ್ದಾರೆ.

ನಾನು ಕೆ ಆರ್ ಎಸ್ ನಲ್ಲಿ ಬಿರುಕು ಬಿಟ್ಟಿದೆ ಅಂತ ಹೇಳಿಲ್ಲ. ಬಿರುಕು ಬಿಟ್ಟಿದೆಯಾ ಅಂತ ಸಭೆಯಲ್ಲಿ ಕೇಳಿದ್ದೇನೆ ಅಷ್ಟೇ. ನನ್ನ ಹೇಳಿಕೆಯನ್ನೇ ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ ಎಂದರು.

ಸಿಬಿಐ ತನಿಖೆ ಆಗಲಿ :

ಕೆ ಆರ್ ಎಸ್ ಡ್ಯಾಂ ಸುತ್ತಮುತ್ತಲಿನ ಗಣಿಗಾರಿಕೆ ಕುರಿತಂತೆ ಸಿಬಿಐ ತನಿಖೆಯಾಗಲಿ, ಈ ಮೂಲಕ ಅಕ್ರಮ ಗಣಿಗಾರಿಕೆಯ ಕುರಿತಂತೆ ಸತ್ಯಾಸತ್ಯತೆ ಹೊರ ಬರಲಿ. ಈ ಬಗ್ಗೆ ನಾನು ಗಣಿ ಸಚಿವ ಮುರುಗೇಶ್ ನಿರಾಣಿಗೆ ಎಲ್ಲವನ್ನು ಹೇಳಿದ್ದೇನೆ ಎಂದರು.

error: Content is protected !!