- ಕನ್ನಡಿಗ ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಮೋದಿ ಸಂದರ್ಶನ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಹೊಸ ವರ್ಷದಲ್ಲಿ ಮೊದಲ ಪಾಡ್ ಕ್ಯಾಸ್ಟ್ ನಲ್ಲಿ ಮಾತನಾಡಿದ್ದು ವಿಡಿಯೊ ಇದೀಗ ಕನ್ನಡಿಗ ನಿಖಿಲ್ ಕಾಮತ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. 2 ಗಂಟೆ 6 ನಿಮಿಷ 20 ಸೆಕೆಂಡ್‌ಗಳಿರುವ ಈ ವಿಡಿಯೊದಲ್ಲಿ ಮೋದಿ ತಮ್ಮ ರಾಜಕೀಯ ಜೀವನದ ಹಲವಾರು ಪ್ರಮುಖ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
“ನಾನು ಕೂಡ ಮನುಷ್ಯ, ದೇವರಲ್ಲ” ಎಂದು ಪ್ರಧಾನಿ ಹೇಳಿರುವುದನ್ನು ನೋಡಬಹುದು. “ನಾನು ಸಿಎಂ ಆದಾಗ ನನ್ನ ಒಂದು ಭಾಷಣದಲ್ಲಿ ನನ್ನ ಪ್ರಯತ್ನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದೆ. ಎರಡನೆಯದಾಗಿ, ನಾನು ನನಗಾಗಿ ಏನನ್ನೂ ಮಾಡುವುದಿಲ್ಲ, ಮೂರನೆಯದಾಗಿ, ನಾನು ಮನುಷ್ಯ ನಾನು ತಪ್ಪುಗಳನ್ನು ಮಾಡಬಹುದು, ಆದರೆ ನಾನು ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ. ನಾನು ಅವುಗಳನ್ನು ನನ್ನ ಜೀವನದ ಮಂತ್ರಗಳನ್ನಾಗಿ ಮಾಡಿಕೊಂಡೆ.
ತಪ್ಪು ಮಾಡುವುದು ಸಹಜ, ನಾನು ಮನುಷ್ಯ ನಾನು ದೇವರಲ್ಲ, ಆದರೆ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ” ಎಂದು ಮೋದಿ ಹೇಳಿದರು.
ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ್ದರ ಬಗ್ಗೆಯೂ ಮೋದಿ ಮಾತು: 2002ರ ಫೆಬ್ರವರಿ 24 ರಂದು ನಾನು ಮೊದಲ ಬಾರಿಗೆ ಶಾಸಕನಾಗಿದ್ದೆ. ಫೆಬ್ರವರಿ 27ಕ್ಕೆ ನಾನು ವಿಧಾನಸಭೆಗೆ ಪ್ರವೇಶಿಸಿದ್ದೆ.
ಗೋಧ್ರಾದಲ್ಲಿ ಘಟನೆ ಆದಾಗ ನನಗೆ ಶಾಸಕನಾಗಿ ಬರೀ ಮೂರು ದಿನಗಳ ಅನುಭವವಿತ್ತಷ್ಟೇ. ರೈಲಿಗೆ ಬೆಂಕಿ ಬಿದ್ದಿದೆ ಎಂದು ಮೊದಲ ಬಾರಿಗೆ ನನಗೆ ವರದಿ ಬಂತು. ಕೆಲ ಹೊತ್ತಿನಲ್ಲಿಯೇ ಅಲ್ಲಿ ಸಾವು ಕಂಡಿರುವವರ ಮಾಹಿತಿಗಳು ಬರಲಾರಂಭಿಸಿತು.
ಈ ವೇಳೆ ನಾನು ವಿಧಾನಸಭೆಯಲ್ಲಿದೆ. ಇದು ನನಗೆ ಚಿಂತೆ ಉಂಟು ಮಾಡಿತ್ತು ಎಂದು ಪ್ರಧಾನಿ ಹೇಳಿದ್ದಾರೆ.
ವಿಧಾನಸಭೆಯಿಂದ ಹೊರಗೆ ಬಂದ ಕೂಡಲೇ, ತಕ್ಷಣವೇ ನಾನು ಗೋಧಾಗೆ ಭೇಟಿ ನೀಡಬೇಕು ಎಂದು ತಿಳಿಸಿದೆ.
ಆದರೆ, ಅಂದು ಕೇವಲ ಒಂದು ಹೆಲಿಕಾಪ್ಟರ್ ಇತ್ತು. ನನ್ನ ಪ್ರಕಾರ ಅದು ಓಎನ್‌ಜಿಸಿ ಕಂಪನಿಗೆ ಸೇರಿದ್ದಾಗಿತ್ತು. ಆದರೆ, ಆ ಹೆಲಿಕಾಪ್ಟರ್ ಸಿಂಗಲ್ ಇಂಜಿನ್ ಆಗಿರುವ ಕಾರಣ, ವಿಐಪಿಗಳು ಅದರಲ್ಲಿ ಪ್ರಯಾಣ ಮಾಡೋದು ಸರಿಯಲ್ಲ. ನೀಡಲು ಸಾಧ್ಯವಿಲ್ಲ ಎಂದಿದ್ದರು.
ಈ ವೇಳೆ ಅವರೊಂದಿಗೆ ಕೆಲ ಮಾತುಕತೆಗಳು ಕೂಡ ನಡೆಯಿತು. ಏನಾದರಾಗಲಿ, ಅದಕ್ಕೆ ನಾನೇ ಜವಾಬ್ದಾರಿ ಎಂದು ಅವರಿಗೆ ಹೇಳಿದ್ದೆ.ಇದನ್ನು ಓದಿ –ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಆ ಬಳಿಕ ಗೋಧಾಗೆ ಭೇಟಿ ನೀಡಲು ಸಾಧ್ಯವಾಯಿತು. ಅಲ್ಲಿನ ನೋವಿನ ದೃಶ್ಯಗಳನ್ನು ನಾನು ನೋಡಿದೆ. ಆ ಮೃತದೇಹಗಳು. ಅಂದು ನಾನು ಜೀವನದ ಪ್ರತಿ ದುಃಖವನ್ನೂ ಅನಬುಭವಿಸಿದೆ. ಆದರೆ, ನಾನು ನನ್ನ ಭಾವನೆಗಳು ಮತ್ತು ನೈಸರ್ಗಿಕ ಪ್ರವೃತ್ತಿಯಿಂದ ದೂರವಿರಬೇಕಾದ ಸ್ಥಾನದಲ್ಲಿ ಕುಳಿತಿದ್ದೇನೆ ಎಂದು ನನಗೆ ತಿಳಿದಿತ್ತು. ನನ್ನನ್ನು ನಿಯಂತ್ರಿಸಲು ನಾನು ಸಾಧ್ಯವಾದಷ್ಟು ಪ್ರಯತ್ನ ಮಾಡಿದೆ ಎಂದು ಅವರು ಹೇಳಿದರು.
More Stories
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ