ಅಂಬರೀಶ್ ಮುಂದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೈಕಟ್ಟಿ ನಿಂತ ಫೋಟೋ ಭಾರೀ ವೈರಲ್ ಮಾಡಿ, ಸುಮಲತಾ ಅಭಿಮಾನಿ ಗಳು ಟ್ರೋಲ್ ಮಾಡುತ್ತಿರುವ ಬಗ್ಗೆ ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಪ್ರತಿಕ್ರಿಯೆ ನೀಡಿ, ಅಂಬರೀಶ್ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನ್ ಗುಲಾಮನ ಎಂದು ಕಿಡಿಕಾರಿದ್ದಾರೆ.
ಬಿಡದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಕುಮಾರಸ್ವಾಮಿ, ನಾನು ಜನ ಸಾಮಾನ್ಯರ ನಾಯಕ. ಜನರ ಬಳಿಯೂ ಹೀಗೆ ಕೈಕಟ್ಟಿ ನಿಲ್ಲುತ್ತೇನೆ. ನಾನು ಕೇವಲ ಅಂಬರೀಶ್ ಬಳಿ ಮಾತ್ರ ಕೈಕಟ್ಟಿ ನಿಲ್ಲಲ್ಲ, ಅದು ನನ್ನ ಸಂಸ್ಕಾರ ಎಂದರು.
ನಮ್ಮ ಬಗ್ಗೆ ಮಾತಾಡುವ ಯೋಗ್ಯತೆ ಸುಮಲತಾರಿಗಿಲ್ಲ. ಹಲವು ವರ್ಷಗಳಿಂದ ಭ್ರಷ್ಟಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು ನಾವು. ನಮ್ಮ ವಿರುದ್ಧವೇ ಭ್ರಷ್ಟಚಾರದ ಆರೋಪ ಮಾಡುತ್ತಿದ್ದಾರೆ. ನನ್ನ ಜೀವನದಲ್ಲೇ ಸುಮಲತಾ ರೀತಿ ಭ್ರಷ್ಟ ಸಂಸದೆಯನ್ನು ಕಂಡಿಲ್ಲ. ಅವರಿಗೆ ಮಾಧ್ಯಮಗಳು ಅಷ್ಟು ಸ್ಕೋಪ್ ಕೊಡಬಾರದು ಎಂದು ಕುಟುಕಿದರು.
ಮುಂದಿನ ಚುನಾವಣೆಯಲ್ಲಿ ಮಂಡ್ಯದಲ್ಲಿ ನಾನೇನು ಎಂದು ತೋರಿಸುತ್ತೇನೆ. ದೇವೇಗೌಡರ ಕುಟುಂಬದ ತಾಕತ್ತು ತೋರಿಸಲಿದ್ದೇವೆ. ಸುಮಲತಾ ಮಂಡ್ಯದಲ್ಲಿ ಮುಂದಿನ ಚುನಾವಣೆ ಗೆಲ್ಲಲಿ ನೋಡೋಣ ಎಂದು ಸವಾಲ್ ಹಾಕಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ