ಹೈದರಾಬಾದ್ ಕಾರ್ಪೋರೇಷನ್ ಚುನಾವಣೆ : 36 ಕ್ಕೆ ಬಿಜೆಪಿ ಜಂಪ್ – ಭಾಗ್ಯ ನಗರದ ಬಾಗಿಲು ತೆರೆಯಿತೆ?

Team Newsnap
1 Min Read

ಗ್ರೇಟರ್ ಹೈದರಾಬಾದ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಮ್ಯಾಜಿಕ್ ಮಾಡಿದೆ.

ಕಳೆದ ಬಾರಿ ಕೇವಲ 4 ಸೀಟ್ ಗಳನ್ನು ಮಾತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 36 ಸೀಟುಗಳನ್ನು ಗೆಲ್ಲುವ ಮೂಲಕ 8 ಪಟ್ಟು ಸಂಖ್ಯೆ ಹೆಚ್ಚಿಸಿ ಕೊಂಡಿದೆ.

ಆಡಳಿತರೂಢ ಟಿಆರ್ ಎಸ್ ಕಳೆದ ಬಾರಿ 90 ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಟಿಆರ್ ಎಸ್ 72 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದೆ.

ಓವೈಸಿಯ ಎಂಐಎಂ 42 ಸ್ಥಾನ ಗಳಿಸಿದೆ. ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿ ತೀವ್ರ ಮುಖಭಂಗ ಅನುಭವಿಸಿದೆ.

ghmc1

ಬಿಜೆಪಿ ಗೆ ಭಾಗ್ಯ ತಂದು ಕೊಟ್ಟ ಭಾಗ್ಯನಗರ :

ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂಬ ಹೆಸರನ್ನು ಮರು ನಾಮಕರಣ ಮಾಡುವುದಾಗಿ ಹೇಳಿ ಬಿಜೆಪಿ ಹಿಂದೂಗಳ ಮತಗಳನ್ನು ಬಾಚಿ ಕೊಂಡಿದೆ.

ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಾರದೆ ಅತಂತ್ರವಾಗಿದೆ. ಬಿಜೆಪಿ ಯಾರ ಜೊತೆ ಸೇರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಕಸರತ್ತು ಮಾಡಿಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾಗ್ಯನಗರ ಎಂಬ ಹೆಸರನ್ನು ಮರು ನಾಮಕರಣ ಮಾಡುವುದೇ ಅಥವಾ ಚುನಾವಣೆಯ ರಾಜಕೀಯ ಲಾಭಕ್ಕಾಗಿ ಹೀಗೆ ಹೇಳಿತೋ ಎಂಬ ಅಂಶ ನಿಗೂಢವಾಗಿದೆ.

ಜಿದ್ದಾಜಿದ್ದಿಯಾಗಿ ನಡೆದ ಈ ಚುನಾವಣೆ ಮುಂದಿನ ವಿಧಾನ ಸಭಾ ಚುನಾವಣೆಯ ದಿಕ್ಸೂಚಿ ಎಂದು ಲೆಕ್ಕಾಚಾರ ಹಾಕಲಾಗಿದೆ.

Share This Article
Leave a comment