ಪತ್ನಿಯೊಬ್ಬಳು ಪತಿಗೆ 4 ಕೋಟಿ ರು ಪಂಗನಾಮ ಹಾಕಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಉದ್ಯಮಿ ಕೃಷ್ಣಾ ಎಂಬುವರಿಗೆ ಪತ್ನಿಯೇ ವಂಚಿಸಿದ್ದಾರೆ.
60 ವರ್ಷದ ಪತ್ನಿ ವಿರುದ್ಧ ಇದೀಗ ಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕಳೆದ ಮೂರು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸವಿದ್ದರು. ಈ ನಡುವೆ ವಿಚ್ಚೇದನಕ್ಕಾಗಿ ಪತ್ನಿ ಅರ್ಜಿ ಸಲ್ಲಿಸಿದ್ದರು.
ಜೊತೆಗೆ ಗಂಡನ ವಿರುದ್ಧ ಕೋರ್ಟ್ ನಲ್ಲಿ ಪತ್ನಿ ಗಂಡ ನನಗೆ ಮಾನಸಿಕ ಹಿಂಸೆ ಕೊಡುತ್ತಾರೆ ಎಂದು ಪೋಲಿಸರಿಗೆ ದೂರು ನೀಡಿದ್ದಾಳೆ.
ಈ ವೇಳೆ ಕೇಸ್ ವಾಪಸ್ ತೆಗೆದುಕೊಂಡು ಡೈವೋರ್ಸ್ ಕೊಡು ಅಂತ ಪತಿ ಹೇಳಿದ್ದರಂತೆ. 4 ಕೋಟಿ ರು ಕೊಟ್ರೆ ಎಲ್ಲವನ್ನೂ ಕ್ಲೀಯರ್ ಮಾಡ್ತೀನಿ ಅಂತ ಪತ್ನಿ ಹೇಳಿದ್ದರಂತೆ.
ಡಿಡಿ ಮೂಲಕ ಪತಿ 4 ಕೋಟಿ ಕೊಟ್ಟಿದ್ದರಂತೆ ಇದೀಗ ಕೇಸ್ ವಾಪಸ್ ಪಡೆದುಕೊಳ್ಳದೇ ಪತ್ನಿ ಎಸ್ಕೇಪ್ ಆಗಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.
ಇನ್ನು ಕೋರ್ಟ್ ವಿಚಾರಣೆಗೂ ಸಹ ಮಹಿಳೆ ಹಾಜರಾಗಿಲ್ಲ. ಸದ್ಯ ಬೆಂಗಳೂರು ಬಿಟ್ಟು ಮಹಿಳೆ ಬೇರೆಡೆ ಹೋಗಿದ್ದು ಆಕೆಯನ್ನ ಕರೆತಂದು ಹಣ ಕೊಡಿಸುವಂತೆ ಪತಿ ಕೃಷ್ಣಾ ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ.
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
More Stories
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ