December 31, 2024

Newsnap Kannada

The World at your finger tips!

c14b726f 1662 41a4 b56d b58a57169b87

ಗಂಡನ ‘ನೈಟ್ ಶಿಫ್ಟ್’ ಕೆಲಸದ ರಹಸ್ಯ ಭೇದಿಸಿ ಪತ್ನಿ ಆತ್ಮಹತ್ಯೆ..!

Spread the love

ಆಕೆಯ ಗಂಡ ನಿತ್ಯವೂ ನೈಟ್ ಶಿಫ್ಟ್ ಕೆಲಸಕ್ಕೆ ಹೋಗವ ನೆಪದಲ್ಲಿ ಮನೆಯಿಂದ ಹೋಗುತ್ತಿದ್ದ ರಹಸ್ಯವನ್ನು ಭೇದಿಸಿ ಬಳಿಕ ಪತ್ನಿ ಸತ್ಯ ತಿಳಿದು ಆಘಾತಗೊಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.‌

ಪತಿ ಹಾಗೂ ಪತ್ನಿಯನ್ನು ಅಭಿಲಾಷ, ಶಶಿಕುಮಾರ್ ಮದುವೆಯ ಬಳಿಕ ಬೆಂಗಳೂರಿನ ಶ್ರೀರಾಮಪುರದಲ್ಲಿ ವಾಸವಿದ್ದರು.

ಈ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ತಾನು ಇಷ್ಟಪಟ್ಟವನ ಜೊತೆಯೇ ಬದುಕಿ ಸುಂದರ ಸಂಸಾರ ಮಾಡಬಹುದೆಂಬ ಖುಷಿಯಲ್ಲಿದ್ದ ಪತ್ನಿಗೆ ಮೂರು ತಿಂಗಳಲ್ಲಿ ಶಾಕ್ ಎದುರಾಗಿತ್ತು.

ನೈಟ್ ಶಿಫ್ಟ್ ಅಂತ ಹೊರ ಹೋದ ಗಂಡನ ಫಾಲೋ ಮಾಡಿದಳು. ಈ ವೇಳೆ ಅಪರಿಚಿತರ ಮನೆ ಮುಂದೆ ಗಂಡನ ಬೈಕ್ ನೋಡಿ ಶಾಕ್ ಆದಳು.
ಇದರಿಂದ ತನ್ನ ಪತಿಯ ಮೇಲೆ ಆಕೆಗೆ ಅನುಮಾನ ಬರಲು ಆರಂಭವಾಯಿತು.

ಒಂದು ದಿನ ಆಕೆ ಪತಿಯ ನೈಟ್ ಶಿಫ್ಟ್ ರಹಸ್ಯ ಭೇದಿಸಿಯೇ ಬಿಟ್ಟಳು. ನೈಟ್ ಶೀಫ್ಟ್ ಅಂತ ಹೇಳಿಕೊಂಡು ಹೋಗುತ್ತಿದ್ದ ಪತಿ ಆತನ ಪ್ರಿಯತಮೆಯ ಮನೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿಟ್ಟ. ಮಂಚನದ ಕೆಳಗೆ ಅವಿತು ಕೂತಿದ್ದ ಪತಿರಾಯನನ್ನು ನೋಡಿ ಪತ್ನಿಯ ಸಿಟ್ಟು ನೆತ್ತಿಗೇರಿತ್ತು.

ಈ ವೇಳೆ ಪತಿಮಹಾಶಯನು ಪತ್ನಿಯನ್ನು ಯಾಕೆ ಬಂದೆ ಅಂತ ಪ್ರಶ್ನಿಸಿ ಅಲ್ಲಿಯೇ ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ. ಪ್ರೀತಿಸಿ ಮದುವೆಯಾದರೂ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಭಿಲಾಷ ತನ್ನ ತಂಗಿಗೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾಳೆ.

ಶ್ರೀ ರಾಮಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಶಶಿಕುಮಾರ್ ನನ್ನು ಬಂಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!