ಫಸ್ಟ್ ನೈಟ್ ನಲ್ಲಿ ಕುಡಿದು ಬಂದ ಪತಿರಾಯನೊಬ್ಬ ಪತ್ನಿ ಮೇಲೆ ಹಲ್ಲೆ ನಡೆಸಿ, ದೈಹಿಕ ಹಿಂಸೆ ಕೊಟ್ಟು ಘಟನೆ ಬೆಂಗಳೂರಿನ ಎಚ್ ಎಎಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಪತ್ನಿ ನೀಡಿದ ದೂರ ಅನ್ವಯ ಪತಿ ಭರತ್ ರೆಡ್ಡಿಯನ್ನು ಬಂಧಿಸಲಾಗಿದೆ.ಮೊದಲ ಮದುವೆಯಾಗಿದ್ದ ಭರತ್ ರೆಡ್ಡಿ, ಆ ವಿಷಯವನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದರು. ಮದುವೆಯಾದ ಮೊದಲ ರಾತ್ರಿಯೇ ಕಂಠ ಪೂರ್ತಿ ಕುಡಿದು ಬಂದಿದ್ದ ಭರತ್ ರೆಡ್ಡಿ ವರ್ತನೆಯಿಂದ ಮದುಮಗಳಿಗೆ ಭಾರಿ ಶಾಖ್ ಕಾದಿತ್ತು. ಅದೇ ರಾತ್ರಿ ದೈಹಿಕ ಹಿಂಸೆ ನೀಡಿದ್ದಾನೆ.
ನಂತರ 20 ದಿನಗಳ ಕಾಲ ಆಕೆಗೆ ಮನೆಯವರೆಲ್ಲಾ ಸೇರಿ ಹಿಂಸೆ ನೀಡಿದ್ದಾರೆ. ಅಲ್ಲದೇ ಭೂತ ದೆವ್ವದ ಹೆಸರಿನಲ್ಲಿ ಅನ್ನ ರಕ್ತ ಸೇರಿಸಿ ಊಟ ಮಾಡಿಸಿ ಹಿಂಸೆ ಕೊಟ್ಟಿದ್ದಾರೆ.
ನನಗೆ ಮದುವೆ ಮಾಡಿಕೊಳ್ಳಲು ಇಷ್ಟ ಇಲ್ಲದೇ ಹೋದರೂ ಬಲವಂತವಾಗಿ ಒಪ್ಪಿಕೊಂಡಿದ್ದೆ. ಮದುವೆಯಾದ ದಿನದಿಂದಲೂ ಹಿಂಸೆ ನೀಡಿದರು ಎಂದು ನೂತನ ವಧು ದೂರಿನಲ್ಲಿ ತಿಳಿಸಿದ್ದಾರೆ.
ಪತಿ ಭರತ್ ರೆಡ್ಡಿ ಪೋಲೀಸರ ಅತಿಥಿಯಾಗಿದ್ದಾನೆ. ವಿಚಾರಣೆ ಮುಂದುವರಿದೆ. ಹಿಂಸೆ ನೀಡಿದ ಮನೆಯವರನ್ನು ಬಂಧಿಸುವ ಸಾಧ್ಯತೆ ಇದೆ.
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!