December 27, 2024

Newsnap Kannada

The World at your finger tips!

sucide

ಪತಿಯ ಕಿರುಕುಳ – ತಾಯಿ, ಮಗ ನೇಣಿಗೆ ಶರಣು

Spread the love

ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬಳು 9 ವರ್ಷದ ಮಗನೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ಸುಚಿತ್ರಾ (34 ), ಮಗ ವಿನೀತ್ (9) ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಓಂ ನಗರದಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿರುವ ಈ ದುರಂತ ನಡೆದಿದೆ. ಇಬ್ಬರೂ ಒಂದೇ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಸುಚಿತ್ರಾ ಪತಿ ಜಗದೀಶ್ ಕಾಂಬಳೆ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ.

ಪಟ್ಟಣದ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಜಗದೀಶ್ ಕಾಂಬಳೆ, ಸುಚಿತ್ರಾಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಮಗುವಿಗೆ ಮಾತು ಬರಲ್ಲ. ಮಾನಸಿಕ ಅಸ್ವಸ್ಥನನ್ನು ಹೆತ್ತಿದೀಯ ಎಂದು ಹಿಂಸೆ ಕೊಡುತ್ತಿದ್ದ. ಇದೇ ವಿಷಯವಾಗಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿನೊಂದಿಗೆ ಸುಚಿತ್ರಾ ನೇಣು ಬಿಗಿದುಕೊಂಡಿರುವ ಶಂಕೆ ಇದೆ.

ಸುಚಿತ್ರಾ ಪೋಷಕರು ಬೆಳಗಾವಿಯಲ್ಲಿ ವಾಸವಾಗಿದ್ದಾರೆ.‌ ವಿಷಯ ತಿಳಿದು ಅವರು ನಗರಕ್ಕೆ ಈಗಾಗಲೇ ಆಗಮಿಸಿದ್ದಾರೆ.‌ ಸುಚಿತ್ರಾ ಮತ್ತು ಬಾಲಕನ ಸಾವಿನ ಬಗ್ಗೆ ಆಕೆಯ ತಂದೆ ನೀಡಿರುವ ದೂರಿನ ಮೇರೆಗೆ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!