ಗಂಡನೊಬ್ಬ ಮೊದಲ ಪತ್ನಿಗೆ ಮೂರು ಜನ ಗಂಡು ಮಕ್ಕಳಿದ್ದರೂ ಸಹ ಎರಡನೇ ಹೆಂಡತಿಗೆ ಎರಡು ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಆಕೆಗೆ ಮಾನಸಿಕ ಕಿರುಕುಳ ಕೊಟ್ಟಿದ್ದಾನೆ. ಗಂಡನ ಕಿರುಕುಳ ತಾಳಲಾರದ ಎರಡನೇ ಹೆಂಡತಿ ತನ್ನ ಎರಡು ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಘಟಪ್ರಭಾ ನದಿಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲೊಳಸೂರ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆ ಸಾವಿತ್ರಿ. ಆರೋಪಿ ಗಂಡನನ್ನು ರಾಜು ಬನಾಜ.
ರಾಜುವಿಗೆ ಈಗಾಗಲೇ ಮದುವೆಯಾಗಿತ್ತು, ಮೊದಲ ಹೆಂಡತಿಗೆ ಮೂರು ಮಕ್ಕಳು. ಈತ ನೀಡುತ್ತಿದ್ದ ಕಿರುಕುಳಕ್ಕೆ ಆಕೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದಳು.
ನಂತರ ರಾಜು ಬನಾಜ ಸಾವಿತ್ರಿಯನ್ನು ಮದುವೆಯಾದ. ಮೊದಲ ಹೆಂಡತಿಗೆ ಮೂರು ಗಂಡು ಮಕ್ಕಳಿರುವ ಕಾರಣ ಅವರ ಲಾಲನೆ ಪಾಲನೆ ಮಾಡೋಕೆ ಬೇಕು ಅಂತ ತನ್ನ ಸಹೋದರ ಸಂಬಂಧದಲ್ಲೆ ರಾಜು ಹಿರಿಯರನ್ನು ಒತ್ತಾಯಿಸಿ ಸಾವಿತ್ರಿ ಕೈ ಹಿಡಿದಿದ್ದ.
ಸಾವಿತ್ರಿ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು. ಅಲ್ಲಿಂದ ವರಸೆ ಬದಲಿಸಿದ್ದ ರಾಜು, ಹೆಣ್ಣು ಮಕ್ಕಳನ್ನು ತಗೊಂಡು ನಾನೇನು ಮಾಡಲಿ ಅಂತ ಸಾವಿತ್ರಿಗೆ ಮಾನಸಿಕ ಕಿರುಕುಳ ನೀಡೋಕೆ ಶುರು ಮಾಡಿದ್ದ. ಅಲ್ಲದೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಸಾವಿತ್ರಿಯನ್ನ ಪೀಡಿಸೋಕು ಶುರುಮಾಡಿದ್ದ.
ಹೀಗಾಗಿ ನನ್ನ ತಂಗಿ ತನ್ನ ಎರಡು ಮಕ್ಕಳನ್ನ ತೆಗೆದುಕೊಂಡು ಇಂತಹ ನಿರ್ಧಾರಕ್ಕೆ ಬಂದಿದ್ದಾಳೆ ಅಂತಾರೆ ಸಾವಿತ್ರಿ ಅಣ್ಣ ಭೀಮಶಿ. ಪೋಲಿಸರು ಪತಿ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ