February 22, 2026

Newsnap Kannada

The World at your finger tips!

crime,murder,women

ಲವರ್ ನೆನಪಿನಲ್ಲೇ ಪತಿ: ಪತ್ನಿಗೆ ಬೇರೆ ಮದುವೆಯಾಗಲು ಒತ್ತಾಯ

Spread the love

ಗೃಹಸ್ಥಾಶ್ರಮಕ್ಕೆ ಬಂದರೂ ಲವರ್ ನೆನಪು ಮರೆಯದ ಪತಿರಾಯನೊಬ್ಬ ತನ್ನ ಪತ್ನಿಗೆ ಬೇರೆ ಮದುವೆಯಾಗು ಎಂದು ಒತ್ತಾಯಿಸಿರುವ ಅಪರೂಪದ ಘಟನೆ ಬೆಂಗಳೂರು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರತಿ ದಿವಸ ಪತಿ ನೀಡುತ್ತಿರುವ ಹಿಂಸೆ, ಕಿರುಕುಳದಿಂದ ಬೇಸತ್ತ ಪತ್ನಿ ಈಗ ಪೊಲೀಸರ ಮೊರೆ ಹೋಗಿದ್ದಾಳೆ. ಅಲ್ಲದೆ ಪತಿ ಮತ್ತು ಕುಟುಂಬದವರ ವಿರುದ್ಧ ದೂರು ನೀಡಿದ್ದಾಳೆ.

ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವಿಶ್ವಾಸ್ ಈಗ ಪತ್ನಿ ವಿರುದ್ಧ ಅವಿಶ್ವಾಸ ತೋರುತ್ತಿದ್ದಾನೆ.

ನೀನು ನನ್ನ ಲವರ್ ರೀತಿ ಇಲ್ಲ. ಮದುವೆಗೆ ಮುನ್ನ ನಾನು ಯುವತಿಯೊಬ್ಬಳ್ಳನ್ನು ಪ್ರಿತಿ ಮಾಡುತ್ತಿದ್ದೆ. ಆದರೆ ಅವಳನ್ನು ಮದುವೆಯಾಗಲು ಮನೆಯವರ ಒಪ್ಪಿಗೆ ಸಿಗಲಿಲ್ಲ.‌ ಕೊನೆಗೆ ಹಿರಿಯರ ಒತ್ತಾಯಕ್ಕೆ ನಾನು ನಿನ್ನನ್ನು ಮದುವೆಯಾದೆ. ಆದರೆ ನೀನು ನನಗೆ ಇಷ್ಟವಿಲ್ಲ. ಬೇಕಾದ್ರೆ ನಾನೇ ನಿಂತು ನಿನಗೆ ವರನೋಡಿ ವಿವಾಹ ಮಾಡಿಸುವುದಾಗಿ ಹೇಳುತ್ತಿದ್ದಾನೆ ಎಂದು ನೊಂದಿರುವ ಪತ್ನಿ ಪೊಲೀಸರಿಗೆ ತನ್ನ ಅಳಲು ತೋಡಿಕೊಂಡಿದ್ದಾಳೆ.

error: Content is protected !!