ಚುನಾವಣೆಯಲ್ಲಿ ಸ್ಪರ್ಧಿ, ಪ್ರತಿಸ್ಪರ್ಧಿ ಪರಸ್ಪರ ಎದುರಾಳು ಮಾಮೂಲು. ಇಲ್ಲೊಂದು ಅಪರೂಪದ ಪ್ರಕರಣವಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ 7ನೇ ಹೊಸಕೋಟೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಫೈಟ್ ಮಾಡಲು ಪತಿ- ಪತ್ನಿ ಸಜ್ಜಾಗಿದ್ದಾರೆ.
ಗ್ರಾಪಂ ಚುನಾವಣೆಯಲ್ಲಿ ಗಂಡನಿಗೆ ಎದುರಾಳಿಯಾಗಿ ಹೆಂಡತಿಯೇ ಸ್ಪರ್ಧೆ ಮಾಡಿದ್ದಾಳೆ. ಪಂಚಾಯಿತಿ 2ನೇ ವಾರ್ಡ್ನಲ್ಲಿರುವ ಕಂಬಿಬಾಣೆಯಲ್ಲಿ ಕಿಶೋರ್ ಸಾಮಾನ್ಯ ಅಭ್ಯರ್ಥಿ ಯಾಗಿದ್ದರೆ, ಅವರ ಪತ್ನಿ ಶ್ರೀಜಾ ಪ್ರತಿ ಸ್ಫರ್ಧಿಯಾಗಿ ಕಣದಲ್ಲಿ ಇದ್ದಾರೆ.
ನಾಳೆ (ಡಿ.22 ) ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡ–ಹೆಂಡತಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೇ ವಾರ್ಡ್‌ನಲ್ಲಿ ಇನ್ನೂ 9 ಮಂದಿ ಕಣದಲ್ಲಿದ್ದಾರೆ.
ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿದ್ದೇವೆ. ಮನೆಯಲ್ಲಷ್ಟೇ ನಾವು ಪತಿ–ಪತ್ನಿ, ಹೊರಗೆ ಚುನಾವಣಾ ಕಣದಲ್ಲಿ ಪ್ರತಿಸ್ಪರ್ಧಿಗಳುʼ ಎಂದು ಇಬ್ಬರೂ ಒಂದೇ ಉತ್ತರ ನೀಡುತ್ತಾರೆ.
ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತಹಾಕಿ ಗೆಲ್ಲಿಸುತ್ತಾರೆ ಕಾದು ನೋಡಬೇಕು. ಆದರೆ ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಆದರೆ ಜನರಿಗೆ ಯಾರು ಸೂಕ್ತ ಎಂದು ಎನಿಸುತ್ತಾರೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿಗಳಾದ ಕಿಶೋರ್ ಶ್ರೀಜಾ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ